ಬೆಂಗಳೂರು: ಇಂದು ಪ್ರೇಮಿಗಳ ದಿನವಿದ್ದು, ಆಚರಣೆಯ ಹಿನ್ನೆಲೆಯಲ್ಲಿ ಪೋಸ್ಟರ್ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದನ್ನು ಕಂಡು ಜನ ಆಶ್ಚರ್ಯ ಪಡುತ್ತಿದ್ದಾರೆ. ಹಲವರು ಇದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ದುಡ್ಡು ಕೊಟ್ಟರೆ ಬಾಡಿಗೆಗೆ ಬಾಯ್ ಫ್ರೆಂಡ್ ಸಿಗುತ್ತಾರೆಂಬ ಪೋಸ್ಟರ್ ವೊಂದು ವೈರಲ್ ಆಗಿದೆ. ಕೇವಲ 389 ರೂ. ಕೊಟ್ಟರೆ ಸಾಕು ಒಂದು ದಿನದ ಪ್ರಿಯತಮ ಸಿಗುತ್ತಾನೆ ಎಂದು ಪೋಸ್ಟರ್ ವೈರಲ್ ಆಗಿದೆ. ಈ ಪೋಸ್ಟರ್ ನಗರದ ಜಯನಗರದಲ್ಲಿ ವೈರಲ್ ಆಗಿದೆ. ಕೆಲವು ಕಿಡಿಗೇಡಿಗಳು ಗೋಡೆಗೆ ಈ ರೀತಿಯ ಪೋಸ್ಟರ್ ಅಂಟಿಸಿದ್ದಾರೆ. ಬಾಯ್ ಫ್ರೆಂಡ್ ಸಿಗ್ತಾನೆ ಸ್ಕ್ಯಾನ್ ಮಾಡಿ ಎಂದು ಪೋಸ್ಟರ್ ಹಾಕಿದ್ದಾರೆ.
“RENT A BOY FRIEND ONLY 389/ SCAN ME” ಎಂದು ಕಿಡಿಗೇಡಿಗಳು ಪೋಸ್ಟರ್ ಅಂಟಿಸಿದ್ದಾರೆ. ಈ ಪೋಸ್ಟರ್ ನೋಡಿದ ಕೆಲವರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಆಗ್ರಹಿಸಿದ್ದಾರೆ.