ಮೈಸೂರು: ನನ್ನನ್ನು ಕಂಡರೆ ವಿರೋಧ ಪಕ್ಷಗಳಿಗೆ ಹೊಟ್ಟೆ ಉರಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ನಾನು ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ ಈಗಲೂ ಒಂದು ಬಾಡಿಗೆ ಮನೆಯಲ್ಲೇ ವಾಸಿಸುತ್ತಿದ್ದೇನೆ. ನನ್ನ ಪ್ರಾಮಾಣಿಕತೆ ಹಾಗೂ ಹಿಂದುಳಿದ ವ್ಯಕ್ತಿ ಎರಡು ಬಾರಿ ಸಿಎಂ ಆಗಿದ್ದಾನೆ ಎಂಬ ಕಾರಣಕ್ಕೆ ವಿರೋಧ ಪಕ್ಷಗಳಿಗೆ ಹೊಟ್ಟೆ ಉರಿ ಇದೆ ಎಂದಿದ್ದಾರೆ.
ಹೀಗಾಗಿಯೇ ತಮ್ಮ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ ವರ್ಚಸ್ಸು ಕಡಿಮೆ ಮಾಡುವ ಯತ್ನ ಮಾಡುತ್ತಿದ್ದಾರೆ. ನನಗೆ ಅದರೆ ತನಗೆ ಜನ ನೀಡುವ ವರ್ಚಸ್ಸು, ಅಧಿಕಾರ ಮತ್ತು ಆಶೀರ್ವಾದದ ಮುಂದೆ ಯಾವುದು ಇಲ್ಲ ಎಂದು ಹೇಳಿದ್ದಾರೆ.