ಬಿಗ್‌ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಅವರು ಲವ್ ಟ್ರ್ಯಾಕ್ ಆರಂಭಿಸಲು ಪ್ರಯತ್ನಿಸಿದ್ದಾರೆ. ಸೂರಜ್ ಸಿಂಗ್ ಜೊತೆ ಲವ್ ಟ್ರ್ಯಾಕ್ ಮಾಡಲು ಪ್ರಯತ್ನಿಸಿದ್ದಾರೆ. ಹೀಗಿರುವಾಗಲೇ ಸುದೀಪ್ ಅವರು ಎಚ್ಚರಿಕೆ ನೀಡಿದ್ದಾರೆ. ಹೀಗೆ ಆದ್ರೆ ರಿಶಿಕಾ ಔಟ್ ಆಗ್ತಾರೆ ಎಂದು ಸುದೀಪ್ ನೇರವಾಗಿ ಹೇಳಿದ್ದನ್ನು ಕಾಣಬಹುದು.
ರಾಶಿಕಾ ಅವರು ಮೊದಲಿನಿಂದಲೂ ಬಿಗ್ ಬಾಸ್ ಮನೆಯಲ್ಲಿ ಜೋಡಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ, ಯಾರೂ ಅವರಿಗೆ ಸೆಟ್ ಆಗಿರಲಿಲ್ಲ. ಈ ವಿಚಾರದಲ್ಲಿ ಅವರಿಗೆ ಬೇಸರ ಇತ್ತು. ಅನೇಕ ಬಾರಿ ಈ ವಿಚಾರವನ್ನು ಅವರೇ ಹೇಳಿಕೊಂಡಿದ್ದರಂತೆ. ಈಗ ಬಿಗ್ ಬಾಸ್ ಮನೆಗೆ ಸೂರಜ್ ಬರುತ್ತಿದ್ದಂತೆ ಅವರಿಗೆ ಖುಷಿ ಆಗಿದೆ ಮತ್ತು ಅವರು ನೇರವಾಗಿ ಹೇಳಿಕೊಂಡಿದ್ದಾರೆ.
ರಾಶಿಕಾ ಅವರು ಸೂರಜ್ ಅವರ ಕೈ ಕೈ ಹಿಡಿದುಕೊಂಡು ಮಾತನಾಡಲು ಆರಂಭಿಸಿದ್ದರು. ಪ್ರೀತಿ ವಿಚಾರವನ್ನು ದಾಳವಾಗಿ ಬಳಕೆ ಮಾಡಿಕೊಂಡು ಗೆಲ್ಲಲು ಅವರು ಪ್ಲ್ಯಾನ್ ರೂಪಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ. ಇದಕ್ಕೆ ಸುದೀಪ್ ಅವರು ನೇರವಾಗಿ ಮಾತನಾಡಿ ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿ : ಟ್ರೇಲರ್ ಮೂಲಕ ಗಮನ ಸೆಳೆದ ‘ಡೀಯಸ್ ಈರೇ’ ಹಾರರ್ ಸಿನಿಮಾ


















