ಚಿಕ್ಕೋಡಿ: ಶ್ರೀರಾಮುಲು (Sriramulu) ಪಕ್ಷಕ್ಕೆ ಬರುವುದನ್ನು ನಾನು ವಿರೋಧಿಸಿಲ್ಲ. ಆದರೆ, ಪಕ್ಷದ ಸಿದ್ಧಾಂತ ಒಪ್ಪಿ ಕಾಂಗ್ರೆಸ್ (Congress) ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.
ಜಿಲ್ಲೆಯ (Belagavi) ಹುಕ್ಕೇರಿ (Hukkeri) ಪಟ್ಟಣದಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ ಮಾಡಿದ ನಂತರ ಮಾತನಾಡಿದ ಅವರು, ಶ್ರೀರಾಮುಲು ಪಶ್ರೀರಾಮುಲು ಪಕ್ಷಕ್ಕೆ ಬರಲು ನನ್ನ ವಿರೋಧವಿಲ್ಲ. ಶ್ರೀರಾಮುಲು ಪಕ್ಷಕ್ಕೆ ಬರುತ್ತಾರೆ ಎನ್ನುವುದು ವದಂತಿ ಅಷ್ಟೇ. ಪಕ್ಷಕ್ಕೆ ಬರುತ್ತಾರೆಂದರೆ ವಿರೋಧಿಸುವುದಿಲ್ಲ. ಅದು ಕೇವಲ ವದಂತಿ ಅಷ್ಟೇ. ಒಂದು ವೇಳೆ ನಾನು ವಿರೋಧಿಸಿದ್ದರೆ, ಪಕ್ಷ ಪ್ರಶ್ನೆ ಮಾಡುತ್ತಿತ್ತು ಎಂದಿದ್ದಾರೆ.
ಡಿಕೆಶಿ ಶ್ರೀರಾಮುಲು ಅವರನ್ನು ಸಂಪರ್ಕ ಮಾಡಿದ್ದು ನನಗೆ ಗೊತ್ತಿಲ್ಲ. ಇನ್ನು ನಾನು ಸಿಎಂ ಆಗುತ್ತೇನೆ ಎಂದು ಹೇಳಿಲ್ಲ. ನಾನು ಸಿಎಂ ಅಭ್ಯರ್ಥಿ ಎಂದು ಹೇಳಿದ್ದೇನೆ. ಸಿಎಂ ಮಾಡುವುದು ಬಿಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಎಲ್ಲರ ಪಾತ್ರವಿದೆ. ನಾನು ಕೂಡ ಭಾಗೀದಾರ. ಡಿಕೆಶಿ ಹಾಗೂ ನನ್ನ ನಡುವೆ ಯಾವುದೇ ಮುನಿಸಿಲ್ಲ. ಎಲ್ಲರೂ ಸೇರಿ ಬೆಳಗಾವಿ ಸಮಾವೇಶ ಯಶಸ್ವಿ ಮಾಡಿದ್ದೇವೆ ಎಂದಿದ್ದಾರೆ.
ರಾಜ್ಯಾಧ್ಯಕ್ಷ ಬದಲಾವಣೆ ಮಾಡುವಷ್ಟು ನಮ್ಮ ಬಳಿ ಶಕ್ತಿಯಿಲ್ಲ. ಅದನ್ನು ಹಿರಿಯರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ.