ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಒಬ್ಬ ಪ್ರಶ್ನಾತೀತಾ ನಾಯಕ. ಅವರ ಹೆಸರನ್ನು ಹೇಳುತ್ತಾ ಟೀಕಿಸಿದರೆ, ನಾವು ದೊಡ್ಡವರು ಆಗಬಹುದು ಎಂದುಕೊಂಡರೆ ಅದು ಸಾಧ್ಯವಾಗದ ಮಾತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಯತ್ನಾಳ್ ಹೆಸರನ್ನು ಉಲ್ಲೇಖಿಸದೇ ಟಾಂಗ್ ಕೊಟ್ಟಿದ್ದಾರೆ.
ಜಾತಿಯ ಹೆಸರನ್ನು ಹೇಳಿಕೊಂಡು ರಾಜಕಾರಣ ಮಾಡಿದವರು ಇಂದು ಮಾಜಿ ಶಾಕರುಗಳಾಗಿದ್ದಾರೆ. ಮಾಜಿ ಸಚಿವರಾಗಿದ್ದಾರೆ. ಯಡಿಯೂರಪ್ಪ ಜಾತಿಯ ಹೆಸರನ್ನು ಹೇಳದೇ ಪಕ್ಷ ಕಟ್ಟಿದವರು. ಅವರನ್ನು ಟೀಕಿಸಿದ್ರೆ ದೊಡ್ಡ ಮನುಷ್ಯರಾಗುವುದಿಲ್ಲ. ಜಾತಿ ಹೆಸರಿನಲ್ಲಿ ರಾಜಕಾರಣ ಮಾಡುವುದನ್ನು ಇಲ್ಲಿ ಒಪ್ಪುವುದಿಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ.