ಬೆಂಗಳೂರು: ನಟ ಕಮಲ್ ಹಾಸನ್ (Kamal Haasan) ಚಿತ್ರ ಬಿಡುಗಡೆಯಾದರೆ ಥಿಯೇಟರ್‌ಗಳಿಗೆ ಬೆಂಕಿ ಹಚ್ಚುತ್ತೇವೆ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ (Narayana Gowda) ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಹಲವರು ಕನ್ನಡದ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದಾರೆ. ಹೊರಗಿಂದ ಬಂದವರು ಕರ್ನಾಟಕ ಹಾಗೂ ಕನ್ನಡಿಗರ ಬಗ್ಗೆ ಮಾತನಾಡುತ್ತಿದ್ದಾರೆ. ತಮಿಳುನಾಡು ಆಗಾಗ ಕಾವೇರಿ ವಿಚಾರದಲ್ಲಿ ಸಂಘರ್ಷ ನಡೆಸುತ್ತಿತ್ತು. ಈಗ ಕಮಲ್ ಹಾಸನ್ ಕನ್ನಡದ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಯಾವ ಆಧಾರದಲ್ಲಿ ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ಏಕಾಏಕಿ ತಮಿಳುಗರನ್ನ ಓಲೈಸುವ ನಿಟ್ಟಿನಲ್ಲಿ ದುರಹಂಕಾರ, ದುರಾಭಿಮಾನದ ಹೇಳಿಕೆ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನೊಂದು ಭಾಷೆ ಬಗ್ಗೆ ಮಾತನಾಡುವಾಗ ಕನಿಷ್ಠ ಅರಿವು ಇರಬೇಕಿತ್ತು. ಅದೇ ಸಂದರ್ಭದಲ್ಲಿ ಕನ್ನಡಿಗರನ್ನ ಒಗ್ಗೂಡಿಸುವ ನಿಟ್ಟಿನಲ್ಲಿ ಹೋರಾಟ ಮಾಡಿದವರ ಸುಪುತ್ರ ಶಿವರಾಜ್ ಕುಮಾರ್ ಇದ್ದರು. ಅವರು ಅಲ್ಲಿಯೇ ಹೇಳಬಹುದಾಗಿತ್ತು. ಕನ್ನಡಕ್ಕೆ ತನ್ನದೇ ಸ್ವಂತಿಕೆ ಇದೆ ಅಂತ ಹೇಳಬಹುದಾಗಿತ್ತು. ಶಿವರಾಜ್ ಕುಮಾರ್ ಕಮಲ್ ಹಾಸನ್ ರನ್ನು ವಹಿಸಿಕೊಂಡು ಮಾತನಾಡಿರುವುದು ತಪ್ಪು ಎಂದಿದ್ದಾರೆ.
ರಮ್ಯ ಹೇಳಿಕೆ ಸರಿಯಲ್ಲ. ರಮ್ಯ ಉಪದೇಶ ಬೇಡ. ನಮ್ಮ ನೆಲದಲ್ಲಿ ಕನ್ನಡವೇ ದೊಡ್ಡದು. ಮೂರ್ಖತನದ ವಿಚಾರವನ್ನು ಸಮರ್ಥನೆ ಮಾಡಿಕೊಳ್ಳುವಾಗ ಉಪಯೋಗಿಸಬೇಡಿ. ಬುದ್ದಿ ಹೇಳುವ ಹಾಗಿದ್ದರೆ ಕಮಲ್ ಹಾಸನ್‌ಗೆ ಹೇಳಿ ಎಂದು ಕಿಡಿಕಾರಿದರು.


















