ಹುಬ್ಬಳ್ಳಿ: ಡಿಜೆ ಬ್ಯಾನ್ ಆಗೋದಾದ್ರೆ ಆಜಾನ್ ಕೂಡ ಬ್ಯಾನ್ ಆಗಬೇಕು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲೀಕ್ ಆಗ್ರಹಿಸಿದ್ದಾರೆ.
ವಿಧಾನಸಭೆಯಲ್ಲಿ ಡಿಜೆ ವಿಚಾರವಾಗಿ ಚರ್ಚೆಯಾಗಿದೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಪ್ರಮೋದ ಮುತಾಲೀಕ್ಸುಪ್ರೀಂ ಕೋರ್ಟ್ ಹೇಳಿದಂತೆ ಬ್ಯಾನ್ ಆಗಬೇಕು ಇದಕ್ಕೆ ಶ್ರೀರಾಮ ಸೇನೆಯ ಒಪ್ಪಿಗೆ ಇದೆ. ಡಿಜೆಯಿಂದ ವಿದ್ಯಾರ್ಥಿಗಳಿಗೆ ರೋಗಿಗಳಿಗೆ ನಾಗರಿಕರಿಗೆ ತೊಂದರೆ ಎಷ್ಟು ಆಗ್ತಾ ಇದೆ. ಅಷ್ಟೇ ತೊಂದರೆ ದಿನಕ್ಕೆ ಐದು ಬಾರಿ ಆಗುವ ಆಜಾನ್ ನಿಂದ ಕೂಡ ಆಗ್ತಾ ಇದೆ. ಡಿಜೆ ಬ್ಯಾನ್ ಆಗೋದಾದ್ರೆ ಅಜಾನ್ ಶಬ್ದವು ಬ್ಯಾನ್ ಆಗಬೇಕು. ಅವರಿಗೆ ಮೈಕ್ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಪ್ರಾರ್ಥನೆ ಮಾಡೋದಕ್ಕೆ ನನ್ನ ಅಭ್ಯಂತರ ಇಲ್ಲ. ವಿಶೇಷ ದಿನಗಳಲ್ಲಿ ಮಾತ್ರ ಡಿಜೆ ಇರುತ್ತೆ. ಆದರೆ ದಿನಕ್ಕೆ ಐದು ಬಾರಿ ಆಜಾನ್ ಕೇಳಬೇಕಾಗುತ್ತದೆ ಇದನ್ನ ಬ್ಯಾನ್ ಮಾಡ್ತೀವಿ ಅಂತ ಯಾರು ಮಾತನಾಡುವುದಿಲ್ಲ. ಆ ಧೈರ್ಯ ಕೂಡ ಯಾರಲ್ಲೂ ಇಲ್ಲ, ಬಿಜೆಪಿಯವರಿಗೂ ಇಲ್ಲ. ಬಿಜೆಪಿ ಅಧಿಕಾರದಲ್ಲೂ ಕೂಡ ಇವರು ಬಾಯಿ ಮುಚ್ಚಿಕೊಂಡು ಕೂತಿದ್ರು ಎಂದು ಹರಿಹಾಯ್ದಿದ್ದಾರೆ.
ಮುಸ್ಲಿಂ ಅಂದ ಕೂಡಲೇ ಹೆದರಿಕೆ ಯಾಕೆ? ಧೈರ್ಯ ಇಲ್ಲದೆ ಇದ್ದರೆ ನಾವು ಹೋರಾಟ ಮಾಡುತ್ತೇವೆ.ಪೊಲೀಸ್ ಇಲಾಖೆಗಂತೂ ಕಿವಿ ಕೇಳಿಸೋದೇ ಇಲ್ಲ ಸರಕಾರದ ಸಿಎಂ, ಡಿಸಿಎಂ, ಮಿನಿಸ್ಟರ್ ಎಲ್ಲರಿಗೂ ಕೇಳುತ್ತಿದ್ದೇನೆ ಆಜಾನ್ ಶಬ್ದ ನಿಮಗೆ ಕೇಳಿಸ್ತಾ ಇಲ್ವಾ..? ಎಂದು ಪ್ರಮೋದ್ ಮುತಾಲಿಕ್ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ : ಇಂದು ನಾಡಿನೆಲ್ಲೆಡೆ ರಂಜಾನ್ ಸಂಭ್ರಮ : ಶಿವಮೊಗ್ಗದಲ್ಲಿ ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ



















