ಬೆಂಗಳೂರು: ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಗಳ ರಿಸ್ಕ್ ಬೇಡ ಎಂದು ಹೆಚ್ಚಿನ ಜನ ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ ಇರಿಸುತ್ತಾರೆ. ಆ ಮೂಲಕ ಕಡಿಮೆ ಆದಾಯವಾದರೂ ಸರಿ, ಹೂಡಿಕೆ ಮೇಲಿನ ಮೊತ್ತಕ್ಕೆ ಖಾತರಿ ರಿಟರ್ನ್ಸ್ ಬಂದರೆ ಸಾಕು ಎಂಬುದು ಅವರ ಅಭಿಪ್ರಾಯವಾಗಿರುತ್ತದೆ. ಆದರೆ, ಇತ್ತೀಚೆಗೆ ಐಸಿಐಸಿಐ ಸೇರಿ ಹಲವು ಬ್ಯಾಂಕುಗಳು ಎಫ್ ಡಿ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಿವೆ. ಇದರಿಂದ ಎಫ್ ಡಿ ಇರಿಸುವವರಿಗೆ ಕಡಿಮೆ ಇರಿಟರ್ನ್ಸ್ ಸಿಗಲಿದೆ.
ಹೌದು, ಐಸಿಐಸಿಐ ಬ್ಯಾಂಕ್ ಮತ್ತು ಎಚ್ ಡಿ ಎಫ್ ಸಿ ಬ್ಯಾಂಕ್ 3 ಕೋಟಿಗಿಂತ ಕಡಿಮೆ ಅವಧಿಯ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರವನ್ನು 20 (0.2%) ಬೇಸಿಸ್ ಪಾಯಿಂಟ್ ಗಳವರೆಗೆ ಇಳಿಕೆ ಮಾಡಿವೆ. ಮೇ ತಿಂಗಳಿನಿಂದಲೇ ಹೊಸ ಬಡ್ಡಿದರಗಳು ಜಾರಿಗೆ ಬಂದಿವೆ. ಹಾಗಾಗಿ, ಹೂಡಿಕೆದಾರರ ಆದಾಯದ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಐಸಿಐಸಿಐ ಬ್ಯಾಂಕಿನ ಎಫ್ ಡಿ ಬಡ್ಡಿದರ
ಒಂದು ವರ್ಷದಿಂದ 15 ತಿಂಗಳವರೆಗಿನ ಮೇಲಿನ ಬಡ್ಡಿದರವನ್ನು ಶೇ.6.7ರಿಂದ ಶೇ.6.5ಕ್ಕೆ ಇಳಿಕೆ ಮಾಡಿದೆ. ಹಾಗೆಯೇ, 15 ತಿಂಗಳಿಂದ 18 ತಿಂಗಳವರೆಗೆ ಬಡ್ಡಿದರವನ್ನು ಶೇ. 6.80 ರಿಂದ ಶೇ. 6.60ಕ್ಕೆ ಇಳಿಕೆ ಮಾಡಲಾಗಿದೆ. 18 ತಿಂಗಳಿಂದ 2 ವರ್ಷಗಳು ಬಡ್ಡಿದರವನ್ನು .7.05 ರಿಂದ ಶೇ. 6.85ಕ್ಕೆ ಇಳಿಸಲಾಗಿದೆ. 2 ವರ್ಷ 1 ದಿನದಿಂದ 5 ವರ್ಷಗಳು ಬಡ್ಡಿದರವನ್ನು ಶೇ. 6.90 ರಿಂದ 6.75% ಕ್ಕೆ ಇಳಿಸಲಾಗಿದೆ.
ಎಚ್ ಡಿ ಎಫ್ ಸಿ ಬ್ಯಾಂಕ್ ಎಫ್ ಡಿ ದರ
ಆರ್ ಬಿ ಐ ರೆಪೊ ದರ ಕಡಿತದ ನಂತರ ಎಚ್ ಡಿ ಎಫ್ ಸಿ ಬ್ಯಾಂಕ್ ಕೂಡ ತನ್ನ ಎಫ್ ಡಿ ಬಡ್ಡಿದರಗಳನ್ನು ಇಳಿಕೆ ಮಾಡಿದೆ. 1 ವರ್ಷದಿಂದ 15 ತಿಂಗಳವರೆಗಿನ ಹೂಡಿಕೆಗೆ 10 ಬೇಸಿಸ್ ಪಾಯಿಂಟ್ಸ್ ಇಳಿಸಿದೆ. ಈಗ ಶೇ.6.6ರ ಬದಲು ಶೇ.6.5ರಷ್ಟು ಬಡ್ಡಿದರ ಸಿಗಲಿದೆ. ರೆಪೊ ದರದ ಇಳಿಕೆಯಿಂದಾಗಿ ಕೆನರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿ ಹಲವು ಬ್ಯಾಂಕ್ ಗಳು ಎಫ್ ಡಿ ಬಡ್ಡಿ ದರ ಇಳಿಕೆ ಮಾಡಿವೆ.