ವಿಜಯಪುರ: ಮುಸ್ಲಿಂ ಯುವತಿಯರಿಗೆ ಆತ್ಮರಕ್ಷಣೆಯ ತರಬೇತಿ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಯುವತಿಯರಿಗೆ ಆತ್ಮ ರಕ್ಷಣೆ ಕಲಿಸುವುದು, ಅವರು ಪ್ರತಿ ದಿನ ನಮ್ಮ ಹೆಣ್ಣು ಮಕ್ಕಳ ಜೊತೆ ಹೊಡೆದಾಡುವುದಕ್ಕಾ? ಮುಸ್ಲಿಂ ಹೆಣ್ಣು ಮಕ್ಕಳಿಗೆ ಏನು ಅನ್ಯಾಯವಾಗಿದೆ? ಎಂದು ಪ್ರಶ್ನಿಸಿದ್ದಾರೆ.
ಹಿಂದೂ ಹೆಣ್ಣು ಮಕ್ಕಳ ಕೊಲೆಯಾಗುತ್ತಿವೆ. ಹಾವೇರಿಯಲ್ಲಿ ಹಿಂದೂ ಯುವತಿಯನ್ನು ಮುಸ್ಲಿಂ ಯುವಕ ಕೊಲೆ ಮಾಡಿದ್ದಾನೆ. ನಿರಂತರವಾಗಿ ಹಿಂದೂ-ದಲಿತ ಹೆಣ್ಣು ಮಕ್ಕಳ ಮೇಲೆ ಈ ಸರ್ಕಾರದಲ್ಲಿ ದೌರ್ಜನ್ಯ ನಡೆಯುತ್ತಿವೆ. ಇದು ಹೀಗೆ ಮುಂದುವರೆದರೆ ಜನರು ದಂಗೆ ಏಳುತ್ತಾರೆ.
ರನ್ಯಾ ಪ್ರಕರಣದ ಬಗ್ಗೆ ಮಾತನಾಡಿದ ಅವರು, ರನ್ಯಾ ನಂಟು ಹೊಂದಿರುವ ಸಚಿವರು ಯಾರು ಎಂಬುವುದು ನನಗೆ ಗೊತ್ತಿದೆ. ಅಧಿವೇಶನದಲ್ಲಿ ಆ ಸಚಿವರ ಹೆಸರನ್ನು ಪ್ರಸ್ತಾಪಿಸುತ್ತೇನೆ. ರನ್ಯಾ ಜೊತೆಗೆ ಸಂಬಂಧ ಹೊಂದಿದವರು. ಆಕೆಗೆ ಪ್ರೋಟೊಕಾಲ್ ಕೊಟ್ಟವರ ಮಾಹಿತಿ ಸಂಗ್ರಹ ಮಾಡಿದ್ದೇವೆ. ಗೋಲ್ಡ್ ಎಲ್ಲಿಂದ ತಂದ್ರು? ಗೋಲ್ಡ್ ಎಲ್ಲಿಟ್ಟು ತಂದ್ರು ಗೊತ್ತಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಡಿ.ಜೆ. ಹಳ್ಳಿ ಹಾಗೂ ಕೆಜೆ ಹಳ್ಳಿಯಲ್ಲಿ ಕೋಮು ಗಲಭೆ ನಡೆದಾಗ ಒಂದು ಎನ್ ಕೌಂಟರ್ ಆಗಬೇಕಿತ್ತು. ಆಗ ಅವರಿಗೆ ಬುದ್ಧಿ ಬರುತ್ತಿತ್ತು. ಮದರಸಾಗಳಿಗೆ ನೂರು ಕೋಟಿ ಬಿಡುಗಡೆ ಮಾಡ್ತಾರೆ. ಆದರೆ, ನಮ್ಮ ಶಾಲೆಗಳಿಗೆ ಶಿಕ್ಷಕರಿಲ್ಲ ಎಂದು ಆರೋಪಿಸಿದ್ದಾರೆ.