ಬೆಂಗಳೂರು : ಕಡಿಮೆ ಬಡ್ಡಿಗೆ ಲೋನ್ ಕೊಡಿಸುತ್ತೀನಿ ಎಂದು ಜನರಿಗೆ ಮಂಕುಬೂದಿ ಎರಚಿದ ಮಹಿಳೆಯನ್ನು ಪೋಲಿಸರ ಬಂಧಿಸಿರುವ ಘಟನೆ ಬಸವೇಶ್ವರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಂಚಕಿ ನಯನಾ ಬಂಧಿತ ಆರೋಪಿ. ಸುಬ್ಬಲಕ್ಷ್ಮಿ ಚಿಟ್ಸ್ ಪ್ರವೆಟ್ ಲಿಮಿಟೆಡ್‌ನಲ್ಲಿ ಕಡಿಮೆ ಬಡ್ಡಿಗೆ ಸಾಲ ಕೊಡಿಸ್ತೇನೆ ಎಂದು ಹೇಳಿ, ಶೇ. 1% ರಷ್ಟು ಬಡ್ಡಿದರದಲ್ಲಿ ಲೋನ್ ಕೊಡಿಸುವುದಾಗಿ ಜನರನ್ನು ನಂಬಿಸುತ್ತಿದ್ದಳು. 10 ಲಕ್ಷ ಸಾಲದ ಹಣಕ್ಕೆ ಮುಂಗಡವಾಗಿ 3 ತಿಂಗಳ ಇ.ಎಂ.ಐ ಕಟ್ಟಬೇಕು ಎಂದು ಸುಮಾರು 15 ಜನರಿಂದ 30 ಸಾವಿರ ಹಣ ಪಡೆದು, ಬರೊಬ್ಬರಿ 12 ಲಕ್ಷ 22 ಸಾವಿರ ರೂಪಾಯಿ ವಂಚನೆ ಎಸಗಿದ್ದಾಳೆ.
ಈ ಪ್ರಕರಣ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಇದೀಗ ಬಸವೇಶ್ವರ ನಗರ ಠಾಣೆಯ ಪೊಲೀಸರು ನಯನಾಳನ್ನು ಬಂಧಿಸಿದ್ದಾರೆ.