ಐದು ವರ್ಷ ನಾನೇ ಸಿಎಂ ಅಂತಾ ಟಗರು ಮತ್ತೆ ಗುಟುರು ಹಾಕಿದೆ. ಹೌದು, ದೆಹಲಿ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಪೂರ್ಣಾವಧಿಗೆ ನಾನೇ ಸಿಎಂ ಅಂತಾ ಘೋಷಿಸಿದ್ದಾರೆ.
ರಾಜ್ಯದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪರ ಹೆಚ್ಚು ಶಾಸಕರ ಬೆಂಬಲವಿಲ್ಲ, ಕೆಲವರು ಅವರು ಸಿಎಂ ಆಗ್ಲಿ ಅಂತಾ ಹೇಳಿಕೆ ನೀಡಿರಬಹುದು. ಆದ್ರೆ ಬಹುಮತದ ಶಾಸಕಾಂಗ ಪಕ್ಷದ ನಾಯಕ ನಾನೇ ಅಂತಾ ಮತ್ತೊಮ್ಮೆ ಗುಟುರು ಹಾಕಿದ್ದಾರೆ. ಇನ್ನು ಕಾಂಗ್ರೆಸ್ ನಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ, ಅದಕ್ಕೆ ನಾನಾಗ್ಲೀ, ಡಿಕೆ ಶಿವಕುಮಾರ್ ಆಗ್ಲಿ ಎಲ್ಲರೂ ಬದ್ಧವಾಗಿರಬೇಕು.
ಇನ್ನು ಡಿಕೆ ಶಿವಕುಮಾರ್ ಎಂದಿಗೂ ನಾನು ಸಿಎಂ ಆಗಬೇಕು ಅಂತಾ ಎಲ್ಲಿಯೂ ಹೇಳಿಲ್ಲ. 2028ರ ಚುನಾವಣೆಗೂ ನನ್ನದೇ ಸಾರಥ್ಯ ಅಂತಾ ಹೇಳಿರುವ ಸಿಎಂ, ಕುರ್ಚಿ ಬಿಡೋ ಪ್ರಶ್ನೆಯೇ ಇಲ್ಲಾ ಅಂತಾ ಘೋಷಿಸಿದ್ದಾರೆ.