ಹುಬ್ಬಳ್ಳಿ : ಕಿಚ್ಚ ಸುದೀಪ್ ಅವರ ‘ಮಾರ್ಕ್’ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದೀಪ್ ತಮ್ಮ ವಿರೋಧಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇಷ್ಟು ದಿನ ತುಂಬಾ ತಡ್ಕೊಂಡಿದ್ದೆ, ಈಗ ಯುದ್ಧಕ್ಕೆ ಸಿದ್ಧ ಎಂದು ಹೇಳುವ ಮೂಲಕ ಕಿಚ್ಚ ಹವಾ ಎಬ್ಬಿಸಿದ್ದಾರೆ.
ಈ ಜರ್ನಿಯಲ್ಲಿ ಡಿಸೆಂಬರ್ 25ಕ್ಕೆ ಥಿಯೇಟರ್ನಲ್ಲಿ ಒಂದು ಸಿನಿಮಾ ಬಿಡುಗಡೆ ಆಗುತ್ತೆ. ಆದರೆ ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿ ಆಗ್ತಿದೆ, ಈ ವೇದಿಕೆ ಮೇಲೆ ನಿಂತು ಹೇಳ್ತಾ ಇದ್ದೀನಿ, ಯುದ್ಧಕ್ಕೆ ಸಿದ್ಧ. ಯಾಕೆಂದರೆ ನಾವು ನಮ್ಮ ಮಾತಿಗೆ ಬದ್ಧ. ಕೆಲವೊಮ್ಮೆ ನನಗೆ ಅನ್ನಿಸುತ್ತದೆ, ಸೈಲೆಂಟ್ ಆಗಿರೋದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ.
ಆದರೆ ನಿಮಗಾಗಿ, ನನ್ನ ಸ್ನೇಹಿತರು ಚೆನ್ನಾಗಿರಬೇಕು ಎಂಬ ಉದ್ದೇಶದಿಂದ, ನಾವೆಲ್ಲರೂ ಚೆನ್ನಾಗಿರಬೇಕು, ನಾವೆಲ್ಲರೂ ಒಳ್ಳೆಯ ಹೆಸರು ಪಡೆಯಬೇಕು ಎಂಬ ಒಂದೇ ಕಾರಣಕ್ಕೆ ನಾನು ಬಾಯಿ, ಎಲ್ಲವನ್ನು ಮುಚ್ಚಿಕೊಂಡು ಇದ್ದೇ ಹೊರತು, ನನಗೆ ಬಾಯಿ ಇಲ್ಲ ಅಂತಲ್ಲ” ಎಂದು ಸುದೀಪ್ ಅವರು ಹೇಳಿದ್ದಾರೆ.
ಬಹಳಷ್ಟು ಕಲ್ಲಿನ ತೂರಾಟ, ನಿನ್ನ ಸಹನೆಯಿಂದಾಗಿ ನಿಮ್ಮ ಮೇಲೆ ಬೀಳುತ್ತಲೇ ಇರುತ್ತೆ. ಅದನ್ನು ತಾವು ತಡೆದುಕೊಂಡು ಬರ್ತಾನೇ ಇದ್ದೀರಿ. ಈಗ ಹೇಳ್ತಾ ಇದ್ದೀನಿ, ಅದನ್ನು ತಡಿಯೋ ತನಕ ತಡ್ಕೊಂಡಿರಿ, ಮಾತಾಡೋ ಟೈಮಲ್ಲಿ ಮಾತಾಡಿ. ಮಾರ್ಕ್ ಒಂದು ಅದ್ಭುತವಾದ ಸಿನಿಮಾ. ವಿಜಯ್ ಕಾರ್ತಿಕೇಯ ನಿಮಗೆ ದೊಡ್ಡ ಥ್ಯಾಂಕ್ಯೂ. ನಿರ್ಮಾಪಕರಿಗೆ ಧನ್ಯವಾದ. ಡಿಸೆಂಬರ್ 25 ರಂದು ಸಿನಿಮಾ ರಿಲೀಸ್ ಆಗ್ತಿದೆ. ಹುಬ್ಬಳ್ಳಿ ಥಿಯೇಟರ್ನಲ್ಲಿ ಕೇಳಿ ಬರುವ ಕೂಗು ನನಗೆ ಬೆಂಗಳೂರಿನಲ್ಲಿ ಕೇಳಿಸಬೇಕು” ಎಂದು ಸುದೀಪ್ ಹೇಳಿದ್ದಾರೆ.
ಇದನ್ನೂ ಓದಿ : ಅಭಯ ಸೇವಾ ಫೌಂಡೇಶನ್ ಬೆಂಗಳೂರು ವತಿಯಿಂದ ‘ಸೇವಾ ಸಂಕಲ್ಪʼ ಕಾರ್ಯಕ್ರಮ



















