ಬೆಂಗಳೂರು: ಸುಳ್ಳು ಪ್ರಕರಣ ದಾಖಲಿಸಿ ನನ್ನನ್ನು ಟೆರರಿಸ್ಟ್ ರೀತಿ ನೋಡಿದರು ಎಂದು ವಿಪ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಟಿ. ರವಿ ಅರೆಸ್ಟ್ ಆಗಿದ್ದರು. ಹೈಕೋರ್ಟ್ ಷರತ್ತು ಬದ್ಧ ಜಾಮೀನು ವಿಧಿಸಿದೆ. ಜಾಮೀನು ಸಿಕ್ಕ ನಂತರ ರವಿ ಮಾತನಾಡಿದ್ದಾರೆ. ಎಲ್ಲರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಸದನದಲ್ಲಿ ನಡೆದಿರುವುದರ ಕುರಿತು ಸಭಾಪತಿ ನೋಡಿಕೊಳ್ಳುತ್ತಾರೆ. ಆದರೆ, ಸುಳ್ಳುಕೇಸ್ ಹಾಕಿ ನನ್ನನ್ನು ಟೆರರಿಸ್ಟ್ ರೀತಿ ನೋಡಿದರು. ನೆನ್ನೆ (ಡಿ. 19) ರಾತ್ರಿಯಿಡೀ ನಿದ್ದೆ ಮಾಡದೆ ನನಗೆ ವಿಪರೀತ ತಲೆ ನೋವು ಬಂದಿದೆ ಎಂದು ಹೇಳಿದ್ದಾರೆ.
ಓರ್ವ ಜನಪ್ರತಿನಿಧಿಯಾದ ನನಗೆ ರಾತ್ರಿ ಊಟ ನೀಡಿಲ್ಲ. ಬೆಳಗ್ಗೆಯಿಂದ ಏನೂ ತಿಂದಿರಲಿಲ್ಲ. ಸಂಜೆಯ ವೇಳೆ ನಾನು ಊಟ ಮಾಡಿದ್ದೇನೆ. ತುಂಬಾ ಸುಸ್ತಾಗಿದ್ದೇನೆ. ಕೋರ್ಟ್ ಜಾಮೀನು ನೀಡಿರುವ ಆದೇಶದ ಪ್ರತಿ ನನಗೆ ಇನ್ನೂ ಸಿಕ್ಕಿಲ್ಲ. ಸಿಕ್ಕ ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದಿದ್ದಾರೆ.