ದಾವಣಗೆರೆ: ಬಿಜೆಪಿ ಅವರಿಗೆ ಅಧಿಕಾರ ಕೊಟ್ಟರೆ ರಾಜ್ಯದಲ್ಲಿ ಜಾತಿವಾದ ಮಾಡ್ತಾರೆ ಹಾಗಾಗಿ ಅವರಿಗೆ ಅಧಿಕಾರ ಕೊಡಬಾರದು ಎಂದು ನಾನು ಕಣದಿಂದ ಹಿಂದೆ ಸರಿದಿರುವೆ ಎಂಸು ಕಾಂಗ್ರೆಸ್‌ನಿಂದ ಬಂಡಾಯ ಘೋಷಣೆ ಮಾಡಿದ್ದ ಸಾಧಿಕ್ ಪೈಲ್ವಾನ್ ಹೇಳಿದ್ದಾರೆ.
ಬಂಡಾಯ ಸ್ಫರ್ಧೆಯಿಂದ ನಿವೃತ್ತ ಘೋಷಣೆ ಮಾಡಿ ಸಮರ್ಥ ಶಾಮನೂರಿಗೆ ಬೆಂಬಲ ಕೊಟ್ಟ ವಿಚಾರವಾಗಿ ಇಂದು ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿದ ಸಾಧಿಕ್ ಪೈಲ್ವಾನ್, ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದಾರೆ. ಹಾಗಾಗಿ ನಾನು ಕಣದಿಂದ ಹಿಂದೆ ಸರಿದಿದ್ದೇನೆ ಎಂದಿದ್ದಾರೆ..
ಬಹಿರಂಗವಾಗಿ ನಾನು ಕಾಂಗ್ರೆಸ್ ಪರ ಕೆಲಸ ಮಾಡುವೆ. ದಾವಣಗೆರೆ ದಕ್ಷಿಣದಲ್ಲಿ 40 ವರ್ಷದಿಂದ ಬಿಜೆಪಿ ಗೆಲ್ಲಿಸಿಲ್ಲ, ರಾಜ್ಯದಲ್ಲಿ ಶಾಂತಿ ನೆಲೆಸಬೇಕು ಎಂದು ಸಿದ್ದರಾಮಯ್ಯ ಡಿಕೆಶಿ ಸೇರಿದಂತೆ ಎಲ್ಲ ನಾಯಕರು ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಅವರು ಜಾತಿವಾದ ಮಾಡ್ತಾರೆ ಅವರಿಗೆ ಅಧಿಕಾರ ಕೊಡಬಾರದು ಎಂದು ನಮ್ಮ ನಿರ್ಧಾರವಾಗಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇದ್ದರೆ ಅಲ್ಪಸಂಖ್ಯಾತರಿಗೆ ನ್ಯಾಯ ಸಿಗುತ್ತದೆ ಹಾಗೂ ನೂರಕ್ಕೆ ನೂರರಷ್ಟು ಶಾಂತಿ ಸಿಗುತ್ತದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಇರೋವರೆಗೆ ರಾಜ್ಯದಲ್ಲಿ ಶಾಂತಿ ನೆಲೆಸುತ್ತದೆ. ನಾವು ಅವರ ಹಾದಿಯಲ್ಲಿ ನಡೆಯುತ್ತಿದ್ದೆವೆ ಆ ನಿಟ್ಟಿನಲ್ಲಿ ನಾವು ಶಾಂತಿಗೊಸ್ಕರ ಸಮಾಜದ ಒಳಿರಿಗೋಗೋಸ್ಕರ, ಧರ್ಮದಲ್ಲಿ, ಸಮಾಜದಲ್ಲಿ ಶಾಂತಿ ನೆಲೆಸುವುದ್ದಕ್ಕಾಗಿ ಈ ನಿರ್ಧಾರ ಮಾಡಿದ್ದಾನೆ. ʼಮರಳಿ ಬಂದ ಸೀತೆ ಹಾಡಿನಂತೆʼ ನಾನು ಪಕ್ಷಕ್ಕೆ ಮರಳಿ ಬಂದಿದ್ದೇನೆ ಎಂದು ಹೇಳಿದ್ದಾರೆ.
ಪರಮಾತ್ಮ ಬಂದು ಹೇಳಿದ್ದರು ನಾಮಪತ್ರ ವಾಪಸ್ ತಗೋಳ್ಳಲ್ಲ ಎಂದಿದ್ದ ಸಾಧಿಕ್ ಪೈಲ್ವಾನ್, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ಮಾಜಿ ನಗರಸಭಾ ಸದಸ್ಯ, ಮುಸ್ಲಿಂ ಸಮಾಜದ ಅಧ್ಯಕ್ಷ, 40 ವರ್ಷದಿಂದ ವಿವಿಧೆಡೆ ಅಧ್ಯಕ್ಷನಾಗಿ ಕೆಲಸ ಮಾಡಿದ್ದೆನೆ. ಅದೆ ನಿಟ್ಟಿನಲ್ಲಿ ಎಲ್ಲ ಸಮುದಾಯದವರು ವಿಶ್ಸಾಸ ಕೊಟ್ಟಿದ್ದರು. ಅದಕ್ಕಾಗಿ ಚುನಾವಣೆಗೆ ನಿಂತಿದ್ದು, ಅದಕ್ಕೆ ಆ ಮಾತು ಹೇಳಿದ್ದು. ಆದ್ರೆ ಈಗ ನಾನು ಕಾಂಗ್ರೆಸ್ ಗೆ ಮರಳಿ ಬಂದಿದ್ಧೆನೆ ಕಾಂಗ್ರೆಸ್ ಪರವಾಗಿ ಕೆಲಸ ಮಾಡ್ತಾ ಇದ್ದೆನೆ ಎಂದು ಹೇಳಿದ್ದಾರೆ.
ನಾನು ಒಂದು ವೇಳೆ ಕಣದಲ್ಲಿ ಇದ್ದಿದ್ದರೆ ಖಂಡಿತ ನನ್ನನ್ನು ಸೋಲಿಸುತ್ತಿದ್ದರು, ಬಿಜೆಪಿಗೆ ಗೆಲ್ಲಿಸುತ್ತಿದ್ದರು. ಈಗ ಸಮಾಜ ಯಾವ ಪಕ್ಷಕ್ಕೆ ತಿರ್ಮಾನ ಮಾಡಬೇಕು ಅದನ್ನು ಮಾಡುತ್ತದೆ.ನಾನು ಸುಮಾಜದ ಮುಖಂಡ ಆಗಿದ್ದು, ಉಳಿದ 13 ಅಭ್ಯರ್ಥಿಗಳನ್ನು ಕರೆದು ಮಾತನಾಡಿಸುವೆ ಎಲ್ಲರ ಮನವೊಲಿಸಿ ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಮಾಡುವಂತೆ ಮಾಡುವೆ ಎಂದಿದ್ದಾರೆ.
ಇದನ್ನೂ ಓದಿ : ರಾಜ್ಯ ರಾಜಕಾರಣದ ದಿಕ್ಕನ್ನು ಬದಲಿಸುವ ಶಕ್ತಿ ಈ ಉಪಚುನಾವಣೆಗಳಲ್ಲಿದೆ – ವಿಜಯೇಂದ್ರ


















