ಬೆಂಗಳೂರು : ನನ್ನ ಜೀವಮಾನದಲ್ಲಿ ಯಾವುದೇ ಬಣದ ನಾಯಕ ನಾನಲ್ಲ, ಯಾವುದೇ ಗುಂಪು ಗಾರಿಕೆ ಅನ್ನೋದೇ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ
ವರದಿಗಾರರೊಂದಿ ಮಾತನಾಡಿದ ಡಿಕೆ ಶಿವಕುಮಾರ್ ನಾನು ೧೪೦ ಶಾಸಕರ ಅಧ್ಯಕ್ಷ. ಮುಖ್ಯಮಂತ್ರಿ ಮತ್ತು ನಾನು ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಿದ್ದೇವೆ. ಸಿಎಂ ಸಂಪುಟ ಪುನಾರಚನೆ ಮಾಡುತ್ತೇನೆ ಎಂದಿದ್ದಾರೆ. ಹೀಗಾಗಿ ಸಚಿವಾಕಾಂಕ್ಷಿಗಳು ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ಪ್ರತಿ ಯೊಬ್ಬ ಮಂತ್ರಿಯಾಗುವ , ಶಾಸಕನಾಗುವ ದೆಹಲಿ ನಾಯಕರನ್ನು ಭೇಟಿ ಮಾಡುವ ತಮ್ಮ ಅಹವಾಲು ಗಳನ್ನ ಹೇಳಿಕೊಳ್ಳುವ ಹಕ್ಕು ಇದೆ. ಹೀಗಾಗಿ ಅವರು ದೆಹಲಿಗೆ ಹೋಗಿದ್ದಾರೆ ಎಂದಿದ್ದಾರೆ.
ಕಳೆದ ಎರಡೂವರೆ ವರ್ಷಗಳಿಂದ ಸಾಕಷ್ಟು ಔತಣಕೂಟ ಆಗಿವೆ. ನಾಲ್ವರು ಡಿಸಿಎಂ ಗಳನ್ನ ಮಾಡಬೇಕು, ಮಂತ್ರಿ ಮಂಡಳದಲ್ಲಿ ತಮ್ಮನ್ನ ಸೇರಿಸಿಕೊಳ್ಳಬೇಕು, ಅಧ್ಯಕ್ಷ ಸ್ಥಾನ ಬದಲಾಯಿಸಬೇಕು, ಎಂಬಿತ್ಯಾದಿ ವಿಚಾರಗಳ ಬಗದಗೆ ಸಾಕಷ್ಟು ಡಿನ್ನರ್ ಸಭೆ ಆಗಿದೆ. ಅದರ ಒಂದು ಭಾಗವೇ ಇದು ಎಂದಿದ್ದಾರೆ.
ಐದು ವರ್ಷ ನಾನೇ ಮುಖ್ಯಮಂತ್ರಿ ಯಾಗಿರುತ್ತೇನೆ ಎಂಬ ಸಿಎಂ ಹೇಳಿಕೆ ವಿಚಾರ ಸಂಬಂಧಿಸಿದಂತೆ ಐ ವಿಶ್ ಹಿಮ್ ಆಲ್ ದಿ ಬೆಸ್ಟ್ ಸಿಎಂ ಸಿದ್ದರಾಮಯ್ಯ ಗೆ ಶುಭಾಶಯ ಹೇಳಿದ್ದಾರೆ.
ಇದನ್ನೂ ಓದಿ : G-20 ಶೃಂಗಸಭೆಗಾಗಿ ಸೌತ್ ಆಫ್ರಿಕಾಗೆ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ!


















