ಹಾವೇರಿ : ‘ಕರ್ನಾಟಕದ ದೀರ್ಘಾವಧಿ ಮುಖ್ಯಮಂತ್ರಿ’ ದಾಖಲೆ ನಿರ್ಮಿಸಿದ ಸಿದ್ದರಾಮಯ್ಯ ಅವರು ಇವತ್ತಿಗೆ ರೆಕಾರ್ಡ್ ರಾಮಯ್ಯ ಆಗಿದ್ದಾರೆ. ಈ ನಡುವೆ ಪವರ್ ಶೇರ್ ಕಥೆ ಏನು? ಸಿದ್ದರಾಮಯ್ಯ ನೆಕ್ಸ್ಟ್ ಗೇಮ್ ಏನು? ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಹೆಚ್ಚಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಜನರ ಆಶೀರ್ವಾದದಿಂದ ದಾಖಲೆ ಬರೆದಿದ್ದೀನಿ, ಇನ್ನೆಷ್ಟು ದಿನ ಇರ್ತೀವೋ ಎನ್ನುವ ಅಚ್ಚರಿ ಮಾತುಗಳನ್ನು ಸಿಎಂ ಸಿದ್ದರಾಮಯ್ಯ ಆಡಿದ್ದಾರೆ.
ನೆನ್ನೆಯಷ್ಟೇ ಪೂರ್ಣಾವಧಿ ಮುಖ್ಯಮಂತ್ರಿಯಾಗುವ ವಿಶ್ವಾಸವಿದೆ ಎಂದು ಹೇಳಿದ್ದ ಅವರು, ಇದೀಗ ರಾಜಕೀಯದಲ್ಲಿ ಇರಬೇಕಾದರೆ ಜನರ ಆಶೀರ್ವಾದ ಇರಬೇಕು. ಇನ್ನೆಷ್ಟು ದಿನ ಇರ್ತೀವೋ ಗೊತ್ತಿಲ್ಲ. ನನ್ನ ಆಡಳಿತದ ಬಗ್ಗೆ ತೃಪ್ತಿ ಇದೆ. ಜನರ ಆಶೀರ್ವಾದದಿಂದ ಇಲ್ಲಿವರೆಗೆ ಬಂದಿದ್ದೀನಿ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ರಾಜಕಾರಣ ತೃಪ್ತಿಕೊಟ್ಟಿದೆ. ಜನರಿಗಾಗಿ ಕೆಲಸ ಮಾಡುವುದೇ ಖುಷಿ. ಪೂರ್ಣಾವಧಿ ಮುಖ್ಯಮಂತ್ರಿ ಆಗುವ ವಿಶ್ವಾಸವಿದ್ದು, ಎಲ್ಲವೂ ಹೈಕಮಾಂಡ್ ತೀರ್ಮಾನವನ್ನು ಅವಲಂಬಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆನ್ನೆ ಹೇಳಿದ್ದರು. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡೆಯುತ್ತಿರುವಾಗಲೇ ಸಿಎಂ ರಾಜಕೀಯ ವೈರಾಗ್ಯದ ಮಾತುಗಳನ್ನಾಡಿರುವುದು ಸದ್ಯ ಚರ್ಚೆಗೆ ಗ್ರಾಸವಾಗಿದೆ.
ಇಂದು ಹಾವೇರಿಯ ಕೊಳ್ಳಿ ಪಾಲಿಟೇಕ್ನಿಕ್ ಆವರಣದ ಹೆಲಿಪ್ಯಾಡ್‌ನಲ್ಲಿ ಮಾತನಾಡಿದ ಸಿಎಂ, ರಾಜಕಾರಣದಲ್ಲಿ ಇರಬೇಕಾದರೆ ಜನರ ಆಶೀರ್ವಾದ ಇರಬೇಕು. ಅವರ ಆಶೀರ್ವಾದದಿಂದ ಇಲ್ಲಿಯವರೆಗೂ ಸಾಗಿ ಬಂದಿದ್ದು, ಜನರ ಆಶೀರ್ವಾದ ಇರುವವರೆಗೆ ರಾಜಕೀಯದಲ್ಲಿರುತ್ತೇನೆ. ನನ್ನ ಆಡಳಿತ ತೃಪ್ತಿ ತಂದಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಪುರುಷರನ್ನು ಬೀದಿನಾಯಿಗೆ ಹೋಲಿಸಿದ್ರಾ ನಟಿ ರಮ್ಯಾ? ಹೊಸ ವಿವಾದ ಎಬ್ಬಿಸಿದ ಸ್ಯಾಂಡಲ್‌ವುಡ್ ಕ್ವೀನ್.. ಹೇಳಿದ್ದೇನು?



















