ಚಿಕ್ಕೋಡಿ: ದೆಹಲಿಯ ಯಾವ ವಿಚಾರವೂ ನನಗೆ ಗೊತ್ತಿಲ್ಲ. ನಾನಂತೂ ದೆಹಲಿಗೆ ಹೊರಟಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಹುಕ್ಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಗೆ ಹೋಗುವುದಾದರೆ ಎಲ್ಲರಿಗೂ ತಿಳಿಸಿಯೇ ಹೋಗುತ್ತೇನೆ. ದಲಿತ ಸಚಿವರು ಯಾರೂ ದೆಹಲಿಗೆ ಹೋಗುತ್ತಿಲ್ಲ. ನಾನು ಕೂಡ ಹೋಗುತ್ತಿಲ್ಲ ಎಂದು ಹೇಳಿದ್ದಾರೆ.
ಡಿಕೆಶಿ ಅಭಿಮಾನಿಗಳಿಂದ ಮುಂದಿನ ಸಿಎಂ ಡಿಕೆ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅದರಲ್ಲಿ ತಪ್ಪೇನಿದೆ? ಹೇಳಲಿ ಬಿಡಿ. ಹೇಳಬಾರದು ಅಂತಾ ಯಾವುದೇ ಕಾಯ್ದೆ ಇಲ್ಲ. ಹೈ ಕಮಾಂಡ್ ಯವುದೇ ಹೇಳಿಕೆ ನೀಡದಂತೆ ಏನೂ ಹೇಳಿಲ್ಲ. ಪಕ್ಷಕ್ಕೆ ಡ್ಯಾಮೇಜ್ ಆಗದಂತೆ ಹೇಳಿಕೆ ನೀಡುವಂತೆ ಸಲಹೆ ನೀಡಿದೆ ಎಂದಿದ್ದಾರೆ.
ಡಿಕೆಶಿ ಪ್ರಯಾಗ್ ರಾಜ್ ಗೆ ಹೋಗುತ್ತಿರುವ ವಿಷಯವಾಗಿ ಪ್ರತಿಕ್ರಿಯೆ ನೀಡಿದ ಅವರು, ಇಲ್ಲೆ ಇದಾವೆ. ನಾವು ಇಲ್ಲಿಯೆ ಹೋಗುತ್ತೇವೆ. ಕೃಷ್ಣ, ಹಿರಣ್ಯಕೇಶಿ, ಘಟಪ್ರಭಾ ನದಿ ಇದೆ. ಇಲ್ಲೇ ಮಾಡಬಹುದು ಎಂದು ಹೇಳಿದ್ದಾರೆ.