ನನಗೆ ನಿಜವಾಗ್ಲೂ ಟೈಮಿಲ್ಲ. ಹಾಗಂತಾ ನಾನು ಹುಚ್ಚನೂ ಅಲ್ಲ ಅಂತಾ ಇದೇ ಮೊದಲ ಬಾರಿ ಆರ್ ಸಿಬಿ ಖರೀದಿಸೋ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿರುವ ಡಿಕೆಶಿ, ನಾನು ಯುವಕನಾಗಿದ್ದಾಗಿನಿಂದಲೂ ಕೆಎಸ್ ಸಿಎ ಸದಸ್ಯನಾಗಿದ್ದೇನೆ. ಹಾಗಂತಾ ಆರ್ ಸಿಬಿ ಖರೀದಿಸುವ ಮನಸ್ಸಾಗ್ಲಿ, ಟೈಮಾಗ್ಲಿ ನನಗಿಲ್ಲ. ನನ್ನದೇ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ನಿಭಾಯಿಸಲಾಗದೆ, ಕುಟುಂಬದ ಸದಸ್ಯರಿಗೆ ಅಧಿಕಾರ ಹಸ್ತಾಂತರಿಸಿದ್ದೇನೆ. ಈ ಹಿಂದೆಯೇ ಕೆಎಸ್ ಸಿಎ ಆಡಳಿತ ಮಂಡಳಿಯಲ್ಲಿ ಪ್ರಮುಖ ಪಾತ್ರ ವಹಿಸುವಂತಾ ಆಫರ್ ಗಳು ಬಂದಿದ್ವು, ಅದನ್ನೂ ನಾನು ನಿರಾಕರಿಸಿದ್ದೇನೆ. ಹಾಗಂತಾ ನನಗೆ ಆರ್ ಸಿಬಿ ಖರೀದಿಯ ಯಾವ ಒಲವೂ ಇಲ್ಲ ಅಂತಾ ಸ್ಪಷ್ಟಪಡಿಸಿರೋ ಡಿಸಿಎಂ, ನಾನು ರಾಯಲ್ ಚಾಲೆಂಜ್ ಮದ್ಯವನ್ನೂ ಸೇವಿಸೋದಿಲ್ಲ ಅಂತಾ ಟಾಂಗ್ ನೀಡಿದ್ದಾರೆ.



















