ಬೆಂಗಳೂರು : ನನಗೆ ಎಕ್ಸಿಟ್ ಪೋಲ್ನಲ್ಲಿ ನಂಬಿಕೆಯಿಲ್ಲ. ಬಿಹಾರದ ಜನತೆ ಮೇಲೆ ನಂಬಿಕೆಯಿದ್ದು, ಮಹಾಘಟಬಂಧನವೇ ಅಧಿಕಾರಕ್ಕೆ ಬರಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತದಾನೋತ್ತರ ಸಮೀಕ್ಷೆಗಳ ಮೇಲೆ ನನಗೆ ನಂಬಿಕೆಯಿಲ್ಲ. ಬಿಹಾರದ ಮತದಾರರು ಬದಲಾವಣೆ ಬಯಸಿದ್ದಾರೆ. ಹೀಗಾಗಿ ಮಹಾಘಟಬಂಧನವೇ ಅಧಿಕಾರಕ್ಕೆ ಬರಲಿದೆ. ಬಿಹಾರದ ಮಾತ್ರವಲ್ಲದೆ, ಯಾವ ಎಕ್ಸಿಟ್ ಪೋಲ್ಗಳ ಮೇಲೆಯೂ ನಂಬಿಕೆಯಿಲ್ಲ. ಅದು ಕರ್ನಾಟಕದಲ್ಲಿ ಆಗಿರಬಹುದು. ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ ನಂತರ ಅವೆಲ್ಲಾ ಸುಳ್ಳಾಗಿದ್ದವು ಎಂದು ಹೇಳಿದ್ದಾರೆ.
ರಾಜ್ಯದ ಮಹದಾಯಿ, ಮೇಕೆದಾಟು ಹಾಗೂ ಎತ್ತಿನಹೊಳೆ ಯೋಜನೆ ಜಾರಿಗೆ ಎದುರಾಗಿರುವ ಬಿಕ್ಕಟ್ಟುಗಳ ಬಗ್ಗೆ ಚರ್ಚಿಸಲು ಈ ಬಾರಿ ದೆಹಲಿಗೆ ತೆರಳುತ್ತೇನೆ. ಸಣ್ಣಪುಟ್ಟ ವಿಚಾರಕ್ಕೂ ಕೇಂದ್ರ ಪರಿಸರ ಇಲಾಖೆಯು ಅನುಮತಿ ನೀಡದೆ, ವಿಳಂಬ ಧೋರಣೆ ತೋರಿದೆ. ಇದರಿಂದ ಯೋಜನಾ ವೆಚ್ಚ ಹೆಚ್ಚಾಗುತ್ತಿದೆ. ಅಲ್ಲದೆ, ಕೇಂದ್ರವು ಅನುದಾನ ನೀಡುತ್ತಿಲ್ಲ. ನಾನು ಬರೆದಿರುವ ನೀರಿನ ಹೆಜ್ಜೆ ಪುಸ್ತಕ ಬಿಡುಗಡೆ ಕಾರ್ಯಕ್ರಮವು ನವೆಂಬರ್ 14ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಡೆಯಲಿದ್ದು, ಅಂದು ವಿಸ್ಕೃತವಾಗಿ ಮಾತನಾಡುತ್ತೇನೆ ಎಂದು ಡಿಕೆಶಿ ತಿಳಿಸಿದ್ದಾರೆ.
ಇದನ್ನೂ ಓದಿ : ದೆಹಲಿ ಸ್ಫೋಟ | ಉನ್ನತ ಮಟ್ಟದ ಭದ್ರತಾ ಸಭೆ ನಡೆಸಿದ ಪ್ರಧಾನಿ ಮೋದಿ!



















