ಬಳ್ಳಾರಿ: ಸಂಡೂರು (Sandur By Election) ಸೋಲಿಗೆ ನಾವು ತಲೆ ಬಾಗುತ್ತೇವೆ. ಆದರೆ, ಈ ರೀತಿಯ ಸೋಲು ಎದುರಾಗುತ್ತದೆ ಎಂದು ಭಾವಿಸಿರಲಿಲ್ಲ ಎಂದು ಶಾಸಕ ಜನಾರ್ದನ ರೆಡ್ಡಿ (Janardhana Reddy) ಬೇಸರ ವ್ಯಕ್ತಪಡಿಸಿದ್ದಾರೆ.
ಸಂಡೂರು ಉಪಚುನಾವಣೆಯಲ್ಲಿ ಬಿಜೆಪಿ (BJP) ಸೋಲು ಖಚಿತವಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಡೂರಿನಲ್ಲಿ ಬಿಜೆಪಿ ಗೆಲ್ಲುತ್ತದೆ ಎಂಬ ಭರವಸೆ ಇತ್ತು. ಕಾಂಗ್ರೆಸ್ ನವರು 100 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ. ಹಣ, ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಇಲ್ಲಿ ಪೊಲೀಸರ ದುರ್ಬಳಕೆಯೂ ಆಗಿದೆ. ಆದರೂ ನಮಗೆ 83 ಸಾವಿರ ಮತಗಳ ಬಿದ್ದಿವೆ ಎಂದಿದ್ದಾರೆ.
ಕಾಂಗ್ರೆಸ್ ನಿಂದ ಹಣದ ಹೊಳೆಯೇ ಹರಿದಿದೆ. ಅಧಿಕಾರ ದುರುಪಯೋಗ ಆಗಿದೆ. ವಾಲ್ಮೀಕಿ ಹಗರಣ, ಮುಡಾ ಹಗರಣ ಇವೆಲ್ಲವೂ ಇವತ್ತು ಕೆಲಸ ಮಾಡಿವೆ. ನಾವು ದೊಡ್ಡ ಅಂತರದಿಂದ ಸೋತಿಲ್ಲ. ಕಡಿಮೆ ಅಂತರದಿಂದ ಸೋತಿದ್ದೇವೆ. ಮುಂದಿನ ದಿನಗಳಲ್ಲಿ ಬಿಜೆಪಿಯ ಗೆಲುವು ನಿಶ್ಚಿತವಾಗಿರಲಿದೆ ಎಂದು ಹೇಳಿದ್ದಾರೆ.