ವಯನಾಡು ಭೂಕುಸಿತದಿಂದಾಗಿ ಅಲ್ಲಿನ ಜನರು ಅನುಭವಿಸುತ್ತಿರುವ ಪರಿಸ್ಥಿತಿ ಕಂಡು ನನ್ನ ತಂದೆ ಸತ್ತಾಗ ಆದಷ್ಟೇ ನೋವಾಗುತ್ತಿದೆ ಎಂದು ಸಂಸತ್ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಭೂಕುಸಿತ ಮತ್ತು ಪ್ರವಾಹಕ್ಕೆ ಒಳಗಾಗಿರುವ ವಯನಾಡಿಗೆ ಇಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ. ವಯನಾಡಿನ ಪ್ರವಾಹಪೀಡಿತ ಸಂತ್ರಸ್ತರನ್ನು ಭೇಟಿಯಾಗಿ, ರಾಹುಲ್ ಗಾಂಧಿ ಭಾವುಕರಾಗಿದ್ದಾರೆ. ಈ ವೇಳೆ ನಮ್ಮ ತಂದೆ ತೀರಿಕೊಂಡಾದ ಆದ ನೋವು ಆಗುತ್ತಿದೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಅವರೊಂದಿಗೆ ಕಾಂಗ್ರೆಸ್ ನಾಯಕಿ ಹಾಗೂ ವಯನಾಡು ಲೋಕಸಭಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಇದ್ದರು.
ಕೇರಳ ಮತ್ತು ರಾಷ್ಟ್ರಕ್ಕೆ ಭೀಕರ ದುರಂತವಾಗಿದೆ. ನಾವು ಪರಿಸ್ಥಿತಿಯನ್ನು ಅವಲೋಕಿಸುವುದಕ್ಕೆ ಇಲ್ಲಿಗೆ ಬಂದಿದ್ದೇವೆ. ಹಲವಾರು ಕುಟುಂಬ ಸದಸ್ಯರು ಬೀದಿಗೆ ಬಂದಿದ್ದಾರೆ. ಎಷ್ಟೋ ಜನರು ತಮ್ಮ ತಮ್ಮ ಮನೆ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಅವರಿಗೆ ನಾವು ಸಹಾಯ ಮಾಡಲು ಪ್ರಯತ್ನಿಸುತ್ತೇವೆ. ನನ್ನ ಮಟ್ಟಿಗೆ ಇದು ರಾಷ್ಟ್ರೀಯ ದುರಂತವೇ ಸರಿ. ಇದಕ್ಕೆ ಸರ್ಕಾರದ ಸ್ಪಂದನೆ ಏನಿದೆ ಎಂಬುವುದನ್ನು ನೋಡೋಣ ಎಂದು ಹೇಳಿದ್ದಾರೆ.
ಈ ವೇಳೆ ಚೂರಲ್ಮಲಾಗೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ಪರಿಶೀಲಿಸಿದರು. ಮಧ್ಯಾಹ್ನ ಮೆಪ್ಪಾಡಿಯ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ ತಲುಪಿದರು. ಪರಿಹಾರ, ರಕ್ಷಣೆ ಮತ್ತು ಪುನರ್ವಸತಿ ಕಾರ್ಯಗಳನ್ನು ಪರಿಶೀಲಿಸಲಾಗಿದೆ ಎಂದು ಹೇಳಿದ್ದಾರೆ.