ಬೆಂಗಳೂರು: ಸರ್ಕಾರ, ಸಿಎಂ ಹಾಗೂ ಪಕ್ಷದ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ, ಅದರಂತೆಯೇ ಆಗುತ್ತದೆ ಈ ಹಿಂದಿನ ಅವಧಿಯಲ್ಲಿ ನಾನು ಅವರ ಬಗ್ಗೆ ಹೇಳಿದ್ದೆ, ಹಿಂದಿನ ರಾಜಕೀಯ ಬೆಳವಣಿಗೆ ಸಂದರ್ಭದಲ್ಲಿ ಸಹಾಯ ಮಾಡಬೇಕು. ಇವತ್ತು ಎಲ್ಲರೂ ಏನು ತೀರ್ಮಾನ ಮಾಡುತ್ತಾರೆ ಅದಕ್ಕೆ ನಾವೆಲ್ಲ ಬದ್ದವಾಗಿದೇವೆ ಎಂದು ಡಿ.ಕೆ ಸುರೇಶ್ ಹೇಳಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾತನಾಡಿದ ಸುರೇಶ್, ಯಾರಿಗೂ ತರಾತುರಿಯಿಲ್ಲ. ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಮಾಹಿತಿ ಇಲ್ಲ. ಸದ್ಯಕ್ಕೆ ನಾನು ಬಮೂಲ್ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಉಳಿದಂತೆ ದೊಡ್ಡ ನಾಯಕರಿಗೆ ಕೇಳಿ ನಾನು ಯಾವುದಕ್ಕೂ ಆಕಾಂಕ್ಷಿ ಅಲ್ಲ. ಬಮೂಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡು ಎಂದರೇ ನಾಳೇನೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದಾರೆ.
ಕ್ಷೀರ ಕ್ಷೇತ್ರದಲ್ಲಿ ಚನ್ನಪಟ್ಟಣ ಅತೀ ಹೆಚ್ಚು ಹಾಲು ಕೊಡುತ್ತಿದೆ ಮೂರು ಜಿಲ್ಲೆಯ ನಾಯಕರು ನನ್ನನ್ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಎಲ್ಲರೂ ಒಗ್ಗಟಾಗಿ ಕೆಲಸ ಮಾಡುತ್ತಿದ್ದೇವೆ ಹಾಗೂ ಎಲ್ಲರ ಸಲಹೆ ಸೂಚನೆಗಳನ್ನು ಪಡೆಯುತ್ತಿದ್ದೇವೆ ಎಂದಿದ್ದಾರೆ.
ನಂದಿನಿ ಹಾಲಿಗೆ ಪರಿಸರ ಸ್ನೇಹಿ ಕವರ್ ಬಳಕೆ ಮಾಡುವ ವಿಚಾರವಾಗಿ ಈಗಾಗಲೇ ಬೆಂಗಳೂರಿನ ಒಂದು ಭಾಗವನ್ನು ಆಯ್ಕೆ ಮಾಡಲು ತಿಳಿಸಿದ್ದೇನೆ. ಪರಿಸರ ಸ್ನೇಹಿ ಕವರ್ ವೆಚ್ಚ ಜಾಸ್ತಿ ಆಗುತ್ತದೆ ಇದು ರಾಜ್ಯ ಮಟ್ಟದಲ್ಲಿ ತೀರ್ಮಾನ ಆಗಬೇಕು ಎಂದಿದ್ದಲ್ಲದೇ, ಜಯನಗರದ ಬಿಟಿಎಂ ಭಾಗದಲ್ಲಿ ಮಾಡಲು ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಅತೀ ಶೀಘ್ರವೇ ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಬಿಡುಗಡೆ ಮಾಡುತ್ತೇವೆ. ಪರಿಸರ ಎಲ್ಲರಿಗೂ ಮುಖ್ಯ ಎಂದು ಹೇಳಿದ್ದಾರೆ.
ಮೆಟ್ರೋ ಸ್ಪೇಷನ್ ನಲ್ಲಿ ನಂದಿನಿ ಬೂತ್ ಆರಂಭಿಸುವ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾಪನೆ ಇಡುತ್ತೇವೆ. ಈಗಾಗಲೇ ನಾವು ಅರ್ಜಿ ಕೊಟ್ಟಿದ್ದೇವೆ ಸ್ಥಳ ಪರಿಶೀಲನೆ ನಡೆಯುತ್ತಿದ್ದು, ನಮಗೂ ಮೆಟ್ರೋ ನಡುವೆ ಒಪ್ಪಂದ ಆಗಬೇಕು. ಹೊರಗಿನ ರಾಜ್ಯದಿಂದ ಬಂದವರು ಹೆಚ್ಚಿಗೆ ಬೇಡಿಕೆ ಸಲ್ಲಿಸುತ್ತಾರೆ, ನಮ್ಮಿಂದಲೂ ಕೂಡ ನಿರೀಕ್ಷೆ ಮಾಡುತ್ತಾರೆ ಸ್ಥಳ ಪರಿಶೀಲನೆ ನಂತರ ತೀರ್ಮಾನ ಮಾಡುತ್ತೇವೆ ಎಂದರು.
ಸಿಎಂಗೆ ಸರ್ವೋತ್ತಮ ಅಧಿಕಾರ ಇದೆ ಶಾಸಕರ ಸಮಸ್ಯೆ ಆಲಿಸಬೇಕು ಎಂಬುದು ಮೊದಲಿನಿಂದಲೂ ನಡೆಸಿಕೊಂಡು ಬಂದಿದ್ದಾರೆ.ಇದೀಗ ಜಿಲ್ಲಾ ಮಂತ್ರಿಗಳ ಜೊತೆ ಸೇರಿ ಆಹವಾಲು ಕೇಳುತ್ತಿದ್ದಾರೆ ಇದು ನಿರಂತರವಾಗಿ ನಡೆಯುತ್ತಿರುತ್ತದೆ ಎಂದು ಶಾಸಕರ ಜೊತೆ ಸಿಎ ಸಭೆ ವಿಚಾರದ ನಗ್ಗೆ ತಿಳಿಸಿದರು.
ಯೂರಿಯಾ ಉತ್ಪಾದನೆ ರಾಜ್ಯ ಸರ್ಕಾರ ಮಾಡುವುದಿಲ್ಲ. ಬಿಡುಗಡೆ ಮಾಡಬೇಕಿರುವುದು ಕೇಂದ್ರ ಸರ್ಕಾರ. ಕೇಂದ್ರ ಸರ್ಕಾರ ಅದರ ಜವಾಬ್ದಾರಿ ಹೊತ್ತುಕೊಂಡು ರೈತರ ಸಮಸ್ಯೆಯನ್ನು ಬಗೆಹರಿಸುವುದು ಕೇಂದ್ರದ ಸಚಿವರ ಕರ್ತವ್ಯ. ಸಿಎಂ ಅವರು ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ ಎಂದು ರಾಜ್ಯದಲ್ಲಿ ಯೂರಿಯಾ ಗೊಬ್ಬರ ಕೊರತೆ ಬಗ್ಗೆ ಹೇಳಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮದ ವಿಚಾರ ರಾಹುಲ್ ಗಾಂಧಿ ಅವರ ಹೇಳಿಕೆಗೆ ನನ್ನ ಸಹಮತ ಇದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.