ಬೆಂಗಳೂರು : ಸಿಎಂ – ಡಿಸಿಎಂ ಇಬ್ಬರು ನಮ್ಮವರು. ನಾನು ಇಬ್ಬರ ಜೊತೆಗೂ ಚೆನ್ನಾಗಿದ್ದೇನೆ. ಕಾಂಗ್ರೆಸ್ ನಲ್ಲಿ ನಾನು ಒಂದು ವರ್ಷದ ಮಗು, ನನಗೆ ಯಾವುದು ಬಣ ಇಲ್ಲ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.
ಮಾಧ್ಯಮಗಾರರೊಂದಿಗೆ ಮಾತನಾಡಿದ ಚೆನ್ನಪಟ್ಟಣದ ಶಾಸಕ ಸಿ.ಪಿ.ಯೋಗೇಶ್ವರ್ ಸಿಎಂ – ಡಿಸಿಎಂ ಇಬ್ಬರು ನಮ್ಮವರು. ಡಿಸಿಎಂ ನಮ್ಮ ಜಿಲ್ಲೆಯವರು, ಇದರಲ್ಲಿ ರಾಜಕೀಯ ಏನು ಇಲ್ಲ, ಯಾರಿಗೆ ಸಿಎಂ ಪಟ್ಟ್ ಅನ್ನೋದನ್ನ ಹೈಕಮಾಂಡ್ ನಿರ್ಧಾರ ಮಾಡುತ್ತೇ ಎಂದಿದ್ದಾರೆ.
ನಮ್ಮ ರಾಷ್ಟ್ರೀಯ ಅಧ್ಯಕ್ಷರು ಖರ್ಗೆರವರು ಹೈಕಮಾಂಡ್‌ನಲ್ಲಿ ಮಾತನಾಡಿದ್ದಾರೆ. ನಮ್ಮ ಜಿಲ್ಲೆಯಿಂದ ಬಾಲಕೃಷ್ಣಗೆ ಸಚಿವ ಸ್ಥಾನ ಕೊಡಿ ಎಂದು ಕೇಳ್ತಿದ್ದೇವೆ. ಪಕ್ಷದ ವೇದಿಕೆಯಲ್ಲಿ ಅಭಿಪ್ರಾಯ ಹೇಳ್ತೇವೆ. ಎಲ್ಲವನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : IND vs SA 2nd Test | 201ಕ್ಕೆ ಭಾರತ ಆಲೌಟ್.. ಸೌತ್ ಆಫ್ರಿಕಾಗೆ 314 ರನ್ಗಳ ಮುನ್ನಡೆ!



















