ದೇವೇಗೌಡರಿಗೆ ನನ್ನ ಮೇಲೆ ತುಂಬಾ ನಂಬಿಕೆ ಇತ್ತು. ಎಲ್ಲರಿಗೂ ಒಂದು ಬಿಫಾರಂ ಕೊಟ್ಟಿದ್ದರೆ, ನನಗೆ 7 ಬಿಫಾರಂ ಕೊಟ್ಟಿದ್ದರು. ನಾನು ಎಂಎಲ್ಎ ಆಗಿದ್ದೀನಿ ಅಂದರೆ ಅದಕ್ಕೆ ದೇವೇಗೌಡ್ರು, ಕುಮಾರಸ್ವಾಮಿ ಕಾರಣ ಎಂದು ಮಾಜಿ ಪ್ರಧಾನಿ ದೇವೇಗೌಡರನ್ನು ನೆನೆದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಬಿ.ಎನ್ ರವಿಕುಮಾರ್ ಭಾವುಕರಾಗಿದ್ದಾರೆ.
ಜನರೊಂದಿಗೆ ಜನತಾದಳ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಉಪಸ್ಥಿತಿಯಲ್ಲೇ ಶಾಸಕರು ಭಾವುಕರಾಗಿದ್ದು, ದೇವೇಗೌಡರು ತಮ್ಮ ಮೇಲೆ ಇಟ್ಟಿದ್ದ ನಂಬಿಕೆಯನ್ನು ನೆನೆದು ಭಾವುಕರಾಗಿದ್ದಾರೆ.


















