ಭೀಮಾನಯ್ಕ್ ಈಗಾಗಲೇ KMF ಅಧ್ಯಕ್ಷ್ಯ ಆಗಿದ್ದಾರೆ. ಈಗ ಮತ್ತೊಮ್ಮೆ ಭೀಮಾನಾಯ್ಕ್ ಅಧ್ಯಕ್ಷ್ಯ ಆಗೋದಕ್ಕೆ ನಾವು ವಿರೋಧ ಮಾಡುತ್ತೇವೆ. ನಾನು ಕೆಎಂಎಫ್ ಅಧ್ಯಕ್ಷ್ಯ ಸ್ಥಾನದ ಆಕಾಂಕ್ಷಿ ಎಂದು ಶಾಸಕ ಕೆವೈ ನಂಜೇಗೌಡ ಪುನರುಚ್ಛರಿಸಿದ್ದಾರೆ.
ಕೋಲಾರದ ಮಾಲೂರಿನ ಕೊಮ್ಮನಹಳ್ಳಿಯಲ್ಲಿ ವರದಿಗಾರರಿಗೆ ಅವರು ಪ್ರತಿಕ್ರಿಯಿಸಿ ಮಾತನಾಡಿ, KMF ಅಧ್ಯಕ್ಷ ಸ್ಥಾನ ನೀಡುವುದಾಗಿ ಸಿಎಂ, ಡಿಸಿಎಂ ಈ ಹಿಂದೆಯೇ ಮಾತು ಕೊಟ್ಟಿದ್ದಾರೆ. ಕೆ.ಎಂ.ಎಫ್ ಗೆ ಕೋಲಾರ ಒಕ್ಕೂಟದ ಡೆಲಿಗೇಟ್ ಆಗಿ ನಾನೇ ಹೋಗುತ್ತೇನೆ. ಡಿಕೆ ಸುರೇಶ್ ಅವರಿಗೆ ನಾನು ಪೈಪೋಟಿ ನೀಡಲ್ಲ, ಅವರೇ ನನ್ನ ಅಧ್ಯಕ್ಷ ಮಾಡಬೇಕು ಎಂದು, ಈ ಹಿಂದೆ ಹೇಳಿದ್ದರು. ಡಿಕೆ ಸುರೇಶ್ ಎತ್ತರಕ್ಕೆ ಬೆಳೆದಿದ್ದಾರೆ. ಅವರನ್ನು ಚಾಲೇಂಜ್ ಮಾಡಲ್ಲ ಎಂದು ಹೇಳಿದ್ದಾರೆ.