ದಾವಣಗೆರೆ : ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಮಾತನಾಡಿದ ಶಾಸಕ ಶಿವಗಂಗಾ ಬಸವರಾಜ, ನಾನು ಯಡಿಯೂರಪ್ಪ ಅಭಿಮಾನಿ, ಆದ್ರೆ ಅವರಿಗೆ ವಯಸ್ಸಾಗಿದೆ ಎಂದು ಹೇಳಿದ್ದಾರೆ.
ದಾವಣಗೆರೆಯಲ್ಲಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ ವರದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪರಿಗೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಕೊಟ್ಟರೇ ನಾವು ಗೌರವಿಸುತ್ತೇವೆ. ಆದ್ರೆ ಯಡಿಯೂರಪ್ಪರಿಗೆ ತುಂಬಾ ವಯಸ್ಸಾಗಿದೆ. ನಾವು ಯಡಿಯೂರಪ್ಪರವರ ಅಭಿಮಾನಿಯೇ ಆದ್ರೆ ಗಟ್ಟಿಯಾಗಿ ಓಡಾಡಿ ಸಂಘಟನೆ ಮಾಡುವವರನ್ನು ಮಾಡಿದ್ರೆ ಒಳ್ಳೆಯದು ಎಂದು ಹೇಳಿದ್ದಾರೆ.
ಬಿಜೆಪಿ ಶಾಸಕ ಬಿ.ಪಿ.ಹರೀಶ್ ಹೇಳಿಕೆ:

ಮತ್ತೊಂದೆಡೆ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಹಿರಿಯರು ನಿರ್ಣಯಿಸುತ್ತಾರೆ. ವೀರಶೈವ ಸಂಘಟನೆಗೆ ಹೋರಾಟ ಮಾಡಿದ ಬಹಳಷ್ಟು ಮಠಾಧೀಶರಿದ್ದಾರೆ. ವೀರಶೈವ ಧರ್ಮದ ಬಗ್ಗೆ ಅಧ್ಯಯನ ಮಾಡಿದವರೂ ಇದ್ದಾರೆ. ಇದು ನಮ್ಮ ಲೆವೆಲ್‌ದ್ದು ಅಲ್ಲ, ಹಿರಿಯರು ನಿರ್ಣಯ ಮಾಡಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಬಿಜೆಪಿ ಸರ್ಕಾರದ ಬಹಳಷ್ಟು ಯೋಜನೆಗಳನ್ನು ತಮ್ಮದು ಎಂದು ಬಿಂಬಿಸುತ್ತಿದೆ | ಛಲವಾದಿ



















