ಬೆಂಗಳೂರು: ರಾಜ್ ಬಿ ಶೆಟ್ಟಿ ಅಭಿನಯದ ‘ರಕ್ಕಸಪುರದೋಳ್’ ಚಿತ್ರದ ಟ್ರೈಲರ್ ಅನ್ನು ಕಿಚ್ಚ ಸುದೀಪ್ ಲಾಂಚ್ ಮಾಡಿದ್ದು, ಈ ವೇಳೆ ತಮ್ಮ ಸಿನಿ ಜೀವನದ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ನಾನು ಮತ್ತು ರವಿವರ್ಮಾ ಇಬ್ಬರೂ ಒಂದೇ ಸಮಯದಲ್ಲಿ ಇಂಡಸ್ಟ್ರಿಗೆ ಬಂದವರು. ಚಂದು ಸಿನಿಮಾದ ಶೂಟಿಂಗ್ ವೇಳೆ ರವಿ ಮಾಡಿದ ಸ್ಟಂಟ್‌ಗಳಲ್ಲಿ ಅವನ ಜೀವವೇ ಹೋಗ್ತಿತ್ತು. ಅಷ್ಟು ಕಷ್ಟಪಟ್ಟು ಬಂದವನು ಇಂದು ಕನ್ನಡದಿಂದಲೇ ಆಲ್ ಇಂಡಿಯಾ ಮಟ್ಟದ ಸ್ಟಂಟ್ ಮಾಸ್ಟರ್ ಆಗಿದ್ದಾರೆ ಎಂದು ಕಿಚ್ಚ ಮೆಚ್ಚುಗೆ ವ್ಯಕ್ತಪಡಿಸಿದರು. ನನ್ನನ್ನು ಮಾಸ್ ಹೀರೋ ಆಗಿ ತೋರಿಸಿದ ಪಾಲು ರವಿಗೂ ಸಲ್ಲುತ್ತದೆ ಎಂದು ಹೇಳಿದರು.
ನಿರ್ದೇಶಕ ಪ್ರೇಮ್ ಬಗ್ಗೆ ಹಾಸ್ಯವಾಗಿ ಮಾತನಾಡಿದ ಸುದೀಪ್, ಜೋಗಿ ಪ್ರೇಮ್ ಕಥೆ ಹೇಳುವಾಗ ಬಿಲ್ಡಪ್ ಜಾಸ್ತಿ. ಆದರೆ ಈ ಸಿನಿಮಾದ ಕಥೆ ಕೇಳುವಾಗ ಬೈಗುಳಗಳೇ ಜಾಸ್ತಿ ಬರುತ್ತೆ. ಮೊನ್ನೆ ಕ್ರಿಕೆಟ್ ಫೀಲ್ಡಲ್ಲಿ ನಾನು ಬೈದ ಬೈಗುಳಕ್ಕೂ ಪ್ರೇಮ್ ಇನ್ಸ್ಪಿರೇಷನ್ ಎಂದು ನಗೆ ಚಿಮ್ಮಿಸಿದರು.
ಇನ್ನೂ ರಾಜ್ ಬಿ ಶೆಟ್ಟಿ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ ಕಿಚ್ಚ, ರಾಜ್ ಶೆಟ್ಟಿ ಸಿನಿಮಾಗಳ ಟೈಟಲ್ ಹೇಳೋಕೆ ಆಗಲ್ಲ ಅಂದ್ರೂ ಅವು ಎಲ್ಲವೂ ಸೂಪರ್ ಹಿಟ್. ನಾನು ರಾಜ್ ಶೆಟ್ಟಿಯ ಫ್ಯಾನ್ ಎಂದು ಹೇಳಿದರು.ನಿಮ್ಮ ನಿರ್ದೇಶನದಲ್ಲೂ ಆದಷ್ಟು ಬೇಗ ಒಂದು ಸಿನಿಮಾ ಮಾಡಿಎಂದು ಹೇಳುವ ಮೂಲಕ ವೇದಿಕೆಯನ್ನು ಹರ್ಷದಿಂದ ತುಂಬಿಸಿದರು.
ಇದನ್ನೂ ಓದಿ : ತುಳುನಾಡಿನ ದೈವಕ್ಕೆ ಅಪಮಾನ ಆರೋಪ | ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ FIR!



















