ದಾವಣಗೆರೆ: ವ್ಯಕ್ತಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತ್ತೆ ಸ್ಪೋಟಕ ತಿರುವು ತೆಗೆದುಕೊಂಡಿದೆ. ಪ್ರಿಯಕರನ ಜೊತೆಗೆ ಅಕ್ರಮ ಸಂಬಂಧಕ್ಕೆ ಪತಿಗೆ ಪತ್ನಿಯೆ ಚಟ್ಟ ಕಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಣ್ಣಾಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಅಣ್ಣಾಪುರದ ನಿಂಗಪ್ಪ (32) ಕೊಲೆಯಾದ ಪತಿ.
ಪತ್ನಿ ಲಕ್ಷ್ಮೀ ಪ್ರಿಯಕರ ತಿಪ್ಪೇ ಶ್ ನಾಯ್ಕ್ ಹಾಗೂ ಸ್ನೇಹಿತ ಸಂತೋಷ ಸೇರಿ ಭದ್ರಾ ಚಾನಲ್ ಗೆ ನಿಂಗಪ್ಪನನ್ನು ತಳ್ಳಿ ಕೊಲೆಮಾಡಿದ್ದಾರೆ. ಒಂದು ವರ್ಷದ ನಂತರ ಪೊಲೀಸರು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ ?
ಲಕ್ಷ್ಮಿ ಹಾಗೂ ನಿಂಗಪ್ಪಗೆ ಮದುವೆ ಆಗಿ 8 ವರ್ಷ ಕಳೆದಿದ್ದರು ಮಕ್ಕಳಾಗಿರಿಲಿಲ್ಲ.ಮಕ್ಕಳ ಆಸೆಗೆ ಗಂಡನ ಸ್ನೇಹಿತ ತಿಪ್ಪೇಶ್ ನಾಯ್ಕ್ (29) ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು.
ಅಕ್ರಮ ಸಂಬಂಧ ಹೊಂದಿದ್ದ ಲಕ್ಷ್ಮಿ ಗರ್ಬೀಣಿ ಆಗಿದ್ದಳು, ಆದರೆ ನಿಂಗಪ್ಪಗೆ ಮಕ್ಕಳಾಗಲ್ಲ ಎಂದು ವೈದ್ಯರು ಹೇಳಿದ್ದರೂ ಸಹ ಲಕ್ಷ್ಮಿ ಗರ್ಭಿಣಿ ಆಗಿದ್ದಕ್ಕೆ ಸಿಟ್ಟಿಗೆದ್ದು ಪತಿ ನಿಂಗಪ್ಪ ಹೊಟ್ಟೆಗೆ ಹಲ್ಲೆ ಮಾಡಿದ್ದ.
ನಂತರ ಪತ್ನಿ ಲಕ್ಷ್ಮೀ, ಪ್ರಿಯಕರ ತಿಪ್ಪೇಶ್ ಹಾಗೂ ತಿಪ್ಪೇಶ್ ಸ್ನೇಹಿತ ಸಂತೋಷ ಮೂವರು ಸೇರಿ ಕಳೆದ ವರ್ಷ ಜನವರಿ 2024 ರಂದು ಚಾನಲ್ ಗೆ ತಳ್ಳಿ ಕೊಲೆ ಮಾಡಿದ್ದಾರೆ.
ಕಾಣೆಯಾದ ಬಗ್ಗೆ ನಿಂಗಪ್ಪನ ತಾಯಿ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರ ನೀಡಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಷ್ಟು ಹುಡುಕಿದರು ನಿಂಗಪ್ಪ ಸಿಕ್ಕಿರಲಿಲ್ಲ
ನಂತರ ನಿಂಗಪ್ಪ ಪತ್ನಿ ಲಕ್ಷ್ಮಿ ನಾಪತ್ತೆಯಾಗಿ ಪ್ರಿಯಕರ ತಿಪ್ಪೇಶ್ ಜೊತೆ ಕೇರಳದಲ್ಲಿ ವಾಸವಾಗುದ್ದಾಳೆ ಎಂದು ತಿಳಿದ ಬಳಿಕ ಪೊಲೀಸರು ಇಬ್ಬರನ್ನ ಪತ್ತೆ ಮಾಡಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ. ನಂತರ ಪೊಲೀಸರು ಮೂವರನ್ನ ಬಂಧಿಸಿದ್ದಾರೆ.
\