ಬೆಂಗಳೂರು: ಪತಿ ಹಾಗೂ ಪತ್ನಿ ಜಗಳ ಮಾಡಿಕೊಂಡು, ಇದರಿಂದ ಮನನೊಂದ ಹೆಂಡತಿ ಪುಟ್ಟ ಮಗಳೊಂದಿಗೆ ಪೆಟ್ರೋಲ್ ಸುರಿದು, ಬೆಂಕಿ ಹೆಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಸಂಜೆ ಸಂಜಯನಗರದ ಕೃಷ್ಣಪ್ಪ ಲೇಔಟ್‌ನಲ್ಲಿ ನಡೆದಿದೆ.
ತಾಯಿ ಸೀತಾ(29), ಮಗಳು ಸೃಷ್ಟಿ(4) ಬೆಂಕಿ ಹಚ್ಚಿಕೊಂಡ ಸಾವನ್ನಪ್ಪಿದ ದುರ್ದೈವಿಗಳು. ಈ ಘಟನೆಯಲ್ಲಿ ಸೀತಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಗು ಸೃಷ್ಟಿಗೆ ಗಂಭೀರ ಗಾಯವಾಗಿದ್ದರಿಂದ, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಗಳು ಸೃಷ್ಟಿ ಕೂಡ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.
ನೇಪಾಳ ಮೂಲದ ಗೋವಿಂದ್ ಬಹದ್ದೂರ್ ಮತ್ತು ಸೀತಾ ದಂಪತಿ ಬೆಂಗಳೂರಿನಲ್ಲಿ ಮನೆಗೆಲಸ ಮಾಡಿಕೊಂಡಿದ್ದರು. ಕೆಲಸ ಮಾಡುತ್ತಿದ್ದ ಜಾಗದಲ್ಲೇ ವಾಸವಿದ್ದ ದಂಪತಿಗೆ ಮನೆ ಪಕ್ಕದಲ್ಲಿ ಸಣ್ಣದೊಂದು ಮನೆ ನೀಡಿದ್ದರೂ. ಪತಿ-ಪತ್ನಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಆರೋಪಿಸಲಾಗಿದೆ.
ಪತಿ ನೇಪಾಳಕ್ಕೆ ಹೋದರೆ ಐದಾರು ತಿಂಗಳು ಬರುತ್ತಲೇ ಇರಲಿಲ್ಲ. ಇದರಿಂದ ಪತ್ನಿ ಸೀತಾ ನೊಂದು ಹೋಗಿದ್ದಳು. ನಿನ್ನೆ ಸಂಜೆ ಕೂಡ ದಂಪತಿಗಳು ಫೋನ್ ಮಾಡಿ ಜಗಳವಾಡಿಕೊಂಡಿದ್ದಾರೆ. ಇದರಿಂದ ಮನನೊಂದು ಸೀತ, ತನಗೂ ಹಾಗೂ ಮಗುವಿಗು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಈ ಘಟನಾ ಸಂಬಂಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕಾರಿನ ಸೈಲೆನ್ಸರ್ ಮಾಡಿಫೈ ಮಾಡಿಸಿದ್ದ ವ್ಯಕ್ತಿಗೆ 1.11 ಲಕ್ಷ ರೂ. ದಂಡ!



















