ಬೆಂಗಳೂರು: ಉಸಿರುಗಟ್ಟಿಸಿ ಪತ್ನಿಯನ್ನು ಪತಿಯೇ ಕೊಲೆ ಮಾಡಿರುವ ಘನಟೆಯೊಂದು ನಡೆದಿದೆ.
ಈ ಘಟನೆ ವಾಬಸಂದ್ರ ಬಳಿಯ ನಂಜಾರೆಡ್ಡಿ ಲೇಔಟ್ ನಲ್ಲಿ ನಡೆದಿದೆ. ಒಡಿಶಾ ಮೂಲದ ಬರ್ಸಾ ಪ್ರಿಯದರ್ಶಿನಿ(21) ಕೊಲೆಯಾದವಳು. ಬಿಹಾರ ಮೂಲದ ಸೋಹನ್ ಕುಮಾರ್(26) ಕೊಲೆ ಮಾಡಿದ ಆರೋಪಿ ಎನ್ನಲಾಗಿದೆ.
ಈ ದಂಪತಿ ಕಳೆದ ಒಂದು ವಾರದ ಹಿಂದೆಯಷ್ಟೇ ಸಂಜಯ್ ಯಾದವ್ ಎಂಬುವವರ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದರು. ಆದರೆ, ಸೋಮವಾರ ಮಧ್ಯರಾತ್ರಿ ಮಗುವಿನ ಅಳು ಕೇಳಿದೆ. ಇದರಿಂದ ಮನೆಯ ಮಾಲೀಕನ ಪತ್ನಿ ಹೊರಗೆ ಬಂದಿದ್ದಾರೆ. ಆಗ ಆರೋಪಿ ಸೋಹನ್ ಕುಮಾರ್ ಪರಾರಿಯಾಗಿದ್ದಾನೆ. ಕೊಠಡಿಗೆ ತೆರಳಿ ನೋಡಿದಾಗ ಕೊಲೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.



















