ಚಿಕ್ಕಬಳ್ಳಾಪುರ: ಪೋಷಕರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯ ಮೇಲೆ ಅನುಮಾನಪಟ್ಟು ಗಂಡನೇ ಕೊಲೆ ಮಾಡಿ ಜೈಲಾ ಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನ ಗೆರಿಗೆರೆಡ್ಡಿಪಾಳ್ಯ ನಡೆದಿದೆ.
ದಿಲ್ಷಾತ್ @ಕವಿತ ಕೊಲೆಯಾದ ಪತ್ನಿ, ಬಾಲು ಬಂಧಿತ ಆರೋಪಿ. ಡ್ರೈವರ್ ಆಗಿದ್ದ ಬಾಲು, ಅದೇ ಗ್ರಾಮದ ಅನ್ಯಕೋಮಿನ ದಿಲ್ಷಾತ್‌ಳನ್ನು 4 ವರ್ಷ ಹಿಂದೆ ಪ್ರೀತಿಸಿ ಪೋಷಕರ ವಿರೋಧದ ನಡುವೆಯೂ ಅಂತರ್ ಧರ್ಮಿಯ ವಿವಾಹವಾಗಿದ್ದ, ದಿಲ್ಷಾತ್ ಮದುವೆ ನಂತರ ತನ್ನ ಹೆಸರನ್ನು ಕವಿತಾ ಎಂದು ಬದಲಿಸಿಕೊಂಡಿದ್ದಳು.
ಈ ದಂಪತಿಗೆ ಎರಡು ಹೆಣ್ಣು ಮಕ್ಕಳಿದ್ದು, ಇತ್ತೀಚೆಗೆ ಬಾಲುಗೆ ಹೆಂಡತಿ ದಿಲ್ಷಾತ್ ಅಲಿಯಾಸ್ ಕವಿತಾಳ ಮೇಲೆ ಅನುಮಾನ ಶುರುವಾಗಿತ್ತು. ಯಾರ ಜೊತೆಯೋ ತನ್ನ ಹೆಂಡತಿ ಸಲುಗೆಯಿಂದ ಇದ್ದಾಳೆ. ಫೋನಲ್ಲಿ ಮಾತನಾಡುತ್ತಿದ್ದಾಳೆ ಎಂದು ಪದೇ ಪದೇ ಜಗಳ ಮಾಡುತ್ತಿದ್ದ ಎನ್ನಲಾಗುತ್ತಿದೆ.
ಕೆಲಸಕ್ಕೆ ಹೋಗಿ ಮನೆಗೆ ಬಂದಿದ್ದ ಹೆಂಡತಿ ಜೊತೆಗೆ, ನೀನು ಯಾರ ಜೊತೆಯಲ್ಲೋ ಮಾತನಾಡುತ್ತಿದ್ದೀಯಾ? ಎಂದು ಬಾಲು ಜಗಳ ಶುರು ಮಾಡಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿ ತಾರಕಕ್ಕೇರಿತ್ತು. ಈ ವೇಳೆ ಮನೆಯಲ್ಲಿದ್ದ ರಾಡ್‌ನಿಂದ ಹೆಂಡತಿ ತಲೆಗೆ ಬಲವಾಗಿ ಹೊಡೆದಿದ್ದು, ಆಕೆಗೆ ತೀವ್ರ ರಕ್ತಸ್ರಾವವಾಗಿದೆ. ಕೊನೆಗೆ ಬಾಲು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ದಿಲ್ಷಾತ್ ಸಾವನ್ನಪ್ಪಿದ್ದಾಳೆಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನಾ ಸಣಬಂಧ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿ ಬಾಲುನನ್ನು ಬಂಧನ ಮಾಡಲಾಗಿದೆ.
ತಾಯಿ ಸಾವಿನ ಮನೆ ಸೇರಿದರೆ ಅಪ್ಪ ಪೊಲೀಸರ ಅತಿಥಿಯಾಗಿ ಜೈಲುಪಾಲಾಗಿದ್ದಾನೆ. ಇದರಿಂದ ಪ್ರಪಂಚದ ಪರಿವೇ ಇಲ್ಲದ ಇಬ್ಬರು ಮಕ್ಕಳು ತಾಯಿ-ತಂದೆಯಿಲ್ಲದೆ ಅನಾಥರಾಗಿವೆ.
ಇದನ್ನೂ ಓದಿ: ಕಾರವಾರ | ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ವಿದ್ಯಾರ್ಥಿಗಳ ರಕ್ಷಣೆ



















