ಬೆಂಗಳೂರು | ಕೌಟುಂಬಿಕ ಕಲಹ ಹಿನ್ನೆಲೆ ಅತ್ತೆ, ಮಾವ, ಹೆಂಡತಿ ಸೇರಿ ಗಂಡನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಅನ್ನಪೂರ್ಣೇಶ್ವರಿ ನಗರದ ಮಲ್ಲತ್ತಹಳ್ಳಿಯಲ್ಲಿ ನಡೆದಿದೆ.
ತೌಹಿಬ್ ಪಾಷ ಕೊಲೆಯಾದ ಪತಿ. ಪತ್ನಿ ಸುಹಾನ, ಅತ್ತೆ, ಮಾವನ ಮೇಲೆ ಕೊಲೆ ಆರೋಪ ಕೇಳಿಬಂದಿದೆ. ಮಂಗಳವಾರ ರಾತ್ರಿ ಮನೆಯಲ್ಲಿ ಗಲಾಟೆ ನಡೆದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಪತ್ನಿ, ಆಕೆಯ ತಾಯಿ, ಮತ್ತು ತಂದೆ ಮೂವರು ಸೇರಿ ಕೊಲೆ ಮಾಡಿದ್ದಾರೆ ಎಂದು ತೌಹಿಬ್ ಪಾಷ ಕುಟುಂಬಸ್ಥರು ಆರೋಪಿಸಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಲವ್ ಕಮ್ ಅರೆಂಜ್ ಮ್ಯಾರೇಜ್ ಆಗಿದ್ದ ಜೋಡಿ, ಮದುವೆಯಾಗಿ ಎರಡೇ ತಿಂಗಳಿಗೆ ಗಲಾಟೆ ಮಾಡಿಕೊಂಡಿದ್ದರು.
ಆ ಬಳಿಕ ತೌಹಿಬ್, ಸುಹಾನ ಅತ್ತೆ ಮನೆ ಬಿಟ್ಟು ಬೇರೆ ಕಡೆ ವಾಸವಾಗಿದ್ದರು. ನಂತರ ಅಲ್ಲಿ ಕೂಡ ಇಬ್ಬರ ನಡುವೆ ಗಲಾಟೆ ಆಗುತ್ತಿತ್ತು. ನಿನ್ನೆ ಸಂಜೆ ಸೊಸೆ ಸುಹಾನ ಅತ್ತೆಗೆ ಕರೆ ಮಾಡಿದ್ದಳು. ಮಗಳ ಜೊತೆ ಮನೆಗೆ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಪತಿ ಬಿದ್ದಿದ್ದ. ಚಾಕು ಇರಿದಿದ್ದರಿಂದ ರಕ್ತಸ್ರಾವವಾಗಿ ಮೃತಪಟ್ಟಿದ್ದ.
ಸೊಸೆ ಕುಟುಂಬದ ವಿರುದ್ಧ ತೌಹಿಬ್ ಕುಟುಂಬಸ್ಥರು ಗಂಭೀರ ಆರೋಪ ಮಾಡುತ್ತಿದ್ದು, ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪತ್ನಿ, ಅತ್ತೆ, ಮಾವನ ವಿರುದ್ಧ ಪ್ರಕರಣ ದಾಖಲಾಗಿದೆ. ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ತೌಹಿಬ್ ಪಾಷ ಮೃತದೇಹ ರವಾನೆ ಮಾಡಲಾಗಿದೆ.
ಇದನ್ನೂ ಓದಿ : ಏಕದಿನ ಕ್ರಿಕೆಟ್ ರದ್ದುಗೊಳಿಸಿ, ಟಿ20 ಮತ್ತು ಐಪಿಎಲ್‌ಗೆ ಆದ್ಯತೆ ನೀಡಿ – ಲಲಿತ್ ಮೋದಿ ಸಲಹೆ



















