ಬೆಂಗಳೂರು: ವ್ಯಕ್ತಿಯೊಬ್ಬ ಪತ್ನಿಯ ಕುಡಿತದ ಚಟಕ್ಕೆ ರೋಸಿ ಹೋಗಿದ್ದ. ಹೀಗಾಗಿ ರಿಹ್ಯಾಬ್ ಕೇಂದ್ರಕ್ಕೆ ಸೇರಿದ್ದ. ಆದರೆ, ಆಕೆ ಅಲ್ಲಿಂದಲೇ ಬೇರೊಬ್ಬನೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ.
ನೆಲಮಂಗಲ ತಾಲೂಕಿನ ದಿಣ್ಣೆಪಾಳ್ಯ ಗ್ರಾಮದ ದಂಪತಿಗೆ ಸಂಬಂಧಿಸಿದ ವಿಷಯ ಇದಾಗಿದೆ. ಪತ್ನಿಯ ಕುಡಿತದ ಚಟ ಬಿಡಿಸುವ ಸಲುವಾಗಿ ಪತ್ನಿಯನ್ನ ರಿಹ್ಯಾಬ್ ಕೇಂದ್ರಕ್ಕೆ ಪತಿ ಸೇರಿಸಿದ್ದ. ಆದರೆ, ಮಹಿಳೆಯು ರಿಹ್ಯಾಬ್ ಕೇಂದ್ರದ ಕೆಲಸಗಾರನ ಜೊತೆಯೇ ಪರಾರಿಯಾಗಿದ್ದಾಳೆ.
ಈ ಘಟನೆ ಬೆಂಗಳೂರಿನ ಬಾಗಲಗುಂಟೆ ಹತ್ತಿರ ಮಂಜುನಾಥ ನಗರದಲ್ಲಿ ನಡೆದಿದೆ. ರಿಹ್ಯಾಬ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಸುನೀಲ್ ಎಂಬ ವ್ಯಕ್ತಿಯ ಜೊತೆ ಪರಾರಿಯಾಗಿದ್ದಾಳೆ ಎಂದು ಪತಿ ಗಂಗರಾಜು ಆರೋಪಿಸಿದ್ದು, ಹುಡುಕಿ ಕೊಡುವಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ದಂಪತಿ ಕಳೆದ 13 ವರ್ಷಗಳ ಹಿಂದೆ ಮದುವೆಯಾಗಿದ್ದರು. ಇಬ್ಬರೂ ಬಾಗಲಗುಂಟೆ ಬಳಿಯ ಮಂಜುನಾಥನಗರದಲ್ಲಿ ವಾಸಿಸುತ್ತಿದ್ದರು. ಈಗ ರಿಹ್ಯಾಬ್ ಕೇಂದ್ರದ ಕೆಲಸಗಾರನೊಂದಿಗೆ ತನ್ನ 11 ವರ್ಷದ ಮಗನನ್ನ ಬಿಟ್ಟು ಪರಾರಿಯಾಗಿದ್ದಾಳೆ. ಮಹಿಳೆ ವಿಪರೀತ ಕುಡಿಯುವ ಚಟಕ್ಕೆ ಒಳಗಾಗಿದ್ದರಿಂದ ಪತಿ ರೋಸಿ ಹೋಗಿದ್ದ. ಹೀಗಾಗಿ ಚಟ ಬಿಡಿಸುವುದಕ್ಕಾಗಿ ಸಾಯಿ ಫೌಂಡೇಶನ್ ಹೆಸರಿನ ರಿಹ್ಯಾಬ್ ಕೇಂದ್ರಕ್ಕೆ ಮೇ4 ರಂದು ಸೇರಿಸಿದ್ದ. ನಂತರ ಆಗಸ್ಟ್ 10ನೇ ತಾರೀಖು ಮನೆಗೆ ಪತ್ನಿಯನ್ನು ಕರೆದುಕೊಂಡು ಬಂದಿದ್ದ. ನಂತರ ಆ. 22ರಂದು ನಾಪತ್ತೆಯಾಗಿದ್ದಾಳೆ. ಪತಿ ಗಂಗರಾಜ್ ಬಿಎಂಟಿಸಿ ಕಂಡಕ್ಟರ್ ಆಗಿದ್ದ. ಎಂದಿನಂತೆ ಕರ್ತವ್ಯ ಮುಗಿಸಿ ಮನೆಗೆ ಬಂದು ನೋಡಿದಾಗ ಪತ್ನಿ ನಾಪತ್ತೆಯಾಗಿದ್ದಾಳೆ. ಸದ್ಯ ಈ ಕುರಿತು ಪೊಲೀಸ್ ಠಾಣೆಗೆ ದೂರು ದಾಖಲಿಸಿ, ಪತ್ನಿಯನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ. ಮಿಸ್ಸಿಂಗ್ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಹುಡುಕಾಟ ನಡೆಸಿದ್ದಾರೆ.