ಹಾವೇರಿ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ವ್ಯಾಪಕ ಮಳೆಯಾಗಿದ್ದು, ಹಲವೆಡೆ ಬೃಹತ್ ಮರಗಳು ನೆಲಕ್ಕೆ ಉರುಳಿ ಬಿದ್ದಿವೆ.ಇದರಿಂದಾಗಿ ಜನ- ಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.
ನಗರದ ಹಲವೆಡೆ ಮರಗಳು ನೆಲಕಚ್ಚಿವೆ. ನಗರದ ಹಳೆ ಪಿಬಿ ರೋಡ್ ರಸ್ತೆಯಲ್ಲಿ ನದಿಯಂತೆ ನೀರು ಹರಿದಿದ್ದು, ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿವೆ. ಇದರಿಂದಾಗಿ ವಾಹನ ಸವಾರರು ಪರದಾಟ ನಡೆಸಿದ್ದಾರೆ. ದ್ವಿಚಕ್ರ ವಾಹನ ಸೇರಿ ಕಾರುಗಳು ರಸ್ತೆಯಲ್ಲೇ ಸಿಲುಕಿ, ಸವಾರರು ಒದ್ದಾಡಿದ್ದಾರೆ.


















