ಬೀದರ್ : ಗಡಿನಾಡು ಬೀದರ್‌ನಲ್ಲಿ ಬೆಳ್ಳಂಬೆಳಗ್ಗೆ ರಾಜಾರೋಷವಾಗಿ ಭೂ ಮಾಫಿಯ ನಡೆಯುತ್ತಿರುವ ಘಟನೆ ಜಿಲ್ಲೆಯ ಹೊನ್ನಿಕೇರಿ ಗ್ರಾಮದಲ್ಲಿ ನಡೆದಿದೆ. ಇಷ್ಟಲ್ಲವಾದರೂ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ.
ಇವರಿಗೆ ಯಾರ ಭಯವಿಲ್ಲ ಯಾವ ಅಧಿಕಾರಿಗಳಿಗೂ ಬಗ್ಗದೆ ಗಣಿಗಾರಿಕೆ ನಡಿತಾ ಇದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರಾ? ಅಂತ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಅಧಿಕಾರಿಗಳಿಗೆ ಫೋನ್ ಮಾಡಿದರೂ, ಲೊಕೇಶನ್ ಕಳಿಸಿದರೂ ಸ್ಥಳಕ್ಕೆ ಮಾತ್ರ ಭೇಟಿ ನೀಡುತ್ತಿಲ್ಲ. ಬೆಳ್ಳಂಬೆಳಗ್ಗೆ ಈ ರೀತಿಯ ಭೂ ಮಾಫಿಯಾವಾಗುತ್ತಿದ್ದರು ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ.
ಇದನ್ನೂ ಓದಿ : ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ವರುಣನ ಅಬ್ಬರ.. ಎಲ್ಲೆಲ್ಲಿ?



















