ಕೋಲಾರ: ಇಂದು ಕೋಲಾರದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಹಿನ್ನೆಲೆ ಸಂಪೂರ್ಣ ನಗರ ಕೇಸರಿಮಯದಿಂದ ಕಂಗೊಳಿಸುತ್ತಿದೆ.

ನಗರದ ಜೂನಿಯರ್ ಕಾಲೇಜು ಮೈಧಾನದಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಸಜ್ಜಾಗಿದ್ದು, ಮಧ್ಯಾಹ್ನ 3 ಗಂಟೆಗೆ ಹಿಂದೂ ಸಮಾಜೋತ್ಸವ ಮೆರವಣಿಗೆ ಆರಂಭವಾಗಲಿದೆ. ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಹಿನ್ನಲೆ, ಕೋಲಾರ ನಗರ ಕೋಲಾರ ನಗರದ ಪ್ರಮುಖ ವೃತ್ತಗಳು ಕೇಸರಿಮಯವಾಗಿದ್ದು, ನಗರದ ಮುಖ್ಯ ರಸ್ತೆಯಲ್ಲಿ ಕೇಸರಿ ಬ್ಯಾನರ್, ಬಂಟಿಂಗ್ಸ್‌ಗಳು ರಾರಾಜಿಸುತ್ತಿವೆ.
ಇಂದಿನ ಸಮಾವೇಶದಲ್ಲಿ ಸಾವಿರಾರು ಜನರು ಭಾಗಿಯಾಗುವ ನಿರೀಕ್ಷೆ ಇದ್ದು, ಜೂನಿಯರ್ ಕಾಲೇಜು ಮೈಧಾನದಿಂದ ಮೆರವಣಿಗೆ ಆರಂಭವಾಗಲಿದೆ. ನಂತರ ಸಂಜೆ 5.30 ಕ್ಕೆ ಬೃಹತ್ ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಹಿನ್ನಲೆ ಇಂದು ಕೋಲಾರ ನಗರದಾದ್ಯಂತ ಬೆಳಗ್ಗೆ 6 ರಿಂದ ರಾತ್ರಿ 11 ಗಂಟೆವರೆಗೂ ಮದ್ಯ ಮಾರಾಟ ಬಂದ್ ಮಾಡಿ ಕೋಲಾರ ಜಿಲ್ಲಾಧಿಕಾರಿ ಡಾ. ಎಂಆರ್ ರವಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಶೃಂಗೇರಿಯಲ್ಲಿ ಪೋಟೋಗ್ರಾಫರ್ ನಿಗೂಢ ಸಾವು | ಮನೆ ಹಿತ್ತಲಲ್ಲಿ ಶವ ಪತ್ತೆ!



















