ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ಅವರು ನಂದಿನಿ ದೋಸೆ ಹಿಟ್ಟು ಹಾಗೂ ಇಡ್ಲಿ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು. ಆದರೆ, ಈಗ ಹಿಟ್ಟಿಗೆ ಭಾರೀ ಡಿಮ್ಯಾಂಡ್ ಬಂದಿದೆ.
ಮಾರುಕಟ್ಟೆಗೆ ನಂದಿನ್ ಬ್ರ್ಯಾಂಡ್ ನ ಎರಡೂ ಹಿಟ್ಟು ಕಾಲಿಟ್ಟಿದ್ದೇ ತಡ, ಜನರು ಮುಗಿ ಬಿದ್ದು ಖರೀದಿ ಮಾಡುತ್ತಿದ್ದಾರೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಭರ್ಜರಿ ಮಾರಾಟವಾಗುತ್ತಿವೆ.
ರಾಜಧಾನಿ ಬೆಂಗಳೂರಿನಲ್ಲಿ ನಂದಿನಿ ದೊಸೆ ಹಿಟ್ಟಿಗೆ ಭಾರೀ ಡಿಮ್ಯಾಂಡ್ ಬಂದಿದೆ. ಪರಿಣಾಮ ಕೇವಲ ಮೂರು ದಿನಗಳಲ್ಲೇ 2.250 ಮೆಟ್ರಿಕ್ ಟನ್ ದೋಸೆ ಹಿಟ್ಟು ಮಾರಾಟವಾಗಿದೆ. ಡಿಮ್ಯಾಂಡ್ ಹೆಚ್ಚುತ್ತಿದ್ದಂತೆ ಕೆಎಂಎಫ್ ಸಾಗಾಣಿಕೆಗಾಗಿ ಮತ್ತಷ್ಟು ವಾಹನಗಳನ್ನು ಖರೀದಿಸಲು ಮುಂದಾಗಿದೆ.
ಕೈಗೆಟುಕುವ ದರದಲ್ಲಿ ನಂದಿನ ಬ್ರ್ಯಾಂಡ್ ಹಿಟ್ಟನ್ನು ವಿತರಿಸುತ್ತಿರುವುದರಿಂದಾಗಿ ಗ್ರಾಹಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ಹಿಟ್ಟು ಮಾರಾಟ ಮಾಡಲು ಕೆಎಂಎಫ್ ಚಿಂತನೆ ನಡೆಸಿದೆ.