ಚಿಕ್ಕೋಡಿ: ಇತ್ತೀಚಿನ ದಿನಗಳಲ್ಲಿ ಮನುಷ್ಯನ ದುರಾಸೆಯಿಂದ ಕಾಡು ಪ್ರಾಣಿಗಳೆಲ್ಲ ನಾಡಿಗೆ ಆಗಮಿಸುತ್ತಿವೆ. ಅದರಂತಯೇ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದ ಆಲಗೂರ ತೋಟದ ವಸತಿ ಬಳಿಗೆ ದಿಢೀರನೇ 10 ಅಡಿ ಉದ್ದದ ಮೊಸಳೆ ಪ್ರತ್ಯಕ್ಷವಾಗಿದೆ.
ಧೃತಿಗೆಡದೆ ಮನೆಯ ಸದಸ್ಯರು ಸೇರಿಕೊಂಡು ಮೊಸಳೆಯನ್ನು ಸೆರೆ ಹಿಡಿದಿದ್ದಾರೆ. ನಂತರ ಮೊಸಳೆಯನ್ನು ಗಿಡಕ್ಕೆ ಕಟ್ಟಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅಥಣಿ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸುರಕ್ಷಿತ ಕ್ರಮದಲ್ಲಿ ಮೊಸಳೆಯನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ.