ಬೆಂಗಳೂರು: ಸರ್ಕಾರಿ ಆಸ್ಪತ್ರೆಯ ಹೆರಿಗೆಗೆ ಅಗತ್ಯವಿರುವ ಉಪಕರಣಗಳು ಖಾಸಗಿ ಆಸ್ಪತ್ರೆಯ ಪಾಲಾಗಿರುವ ಬಹುದೊಡ್ಡ ಭ್ರಷ್ಟಾಚಾರ ವೈದ್ಯಕೀಯ ಶಿಕ್ಷಣ ಇಲಾಖೆ ನಡೆಸಿದ ಆತಂರಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಶಿವಾಜಿನಗರದಲ್ಲಿರುವ ಹೆಚ್ಎಸ್.ಐ.ಎಸ್ ಘೋಷ ಆಸ್ಪತ್ರೆಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಪಟ್ಟಂತೆ ಪ್ರಸೂತಿ ಮತ್ತು ಸ್ತ್ರಿರೋಗ ವಿಭಾಗದ ಮುಖ್ಯಸ್ಥೆ ಭಾಗಿಯಾಗಿರುವುದು ಸಾಬೀತಾಗಿ ಅಮಾನತು ಮಾಡಲಾಗಿದೆ.
ಆಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಡಿ ಕಾರ್ಯ ನಿರ್ವಹಿಸುತ್ತಿರುವ ಹೆಚ್ಎಸ್.ಐ.ಎಸ್. ಘೋಷ ಆಸ್ಪತ್ರೆಯು ತಾಯಿ-ಮಕ್ಕಳ ಆಸ್ಪತ್ರೆಯಾಗಿದ್ದು, ಪ್ರತಿನಿತ್ಯ ನೂರಾರು ತಾಯಂದಿರು ಆಸ್ಪತ್ರೆಗೆ ಭೇಟಿ ಕೊಡುತ್ತಾರೆ. ಪ್ರತಿ ಈ ಆಸ್ಪತ್ರೆ ಸಾವಿರಾರು ಸಂಖ್ಯೆಯಲ್ಲಿ ಹೆರಿಗೆಗಳನ್ನು ಮಾಡಿಸಲಾಗುತ್ತದೆ.
ಆಸ್ಪತ್ರೆಯ ಅಕ್ರಮದ ಕುರಿತಂತೆ ಈ ಹಿಂದೆ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಡಾ. ದೀಪಿಕಾ ವಿರುದ್ಧ ದೂರು ದಾಖಲಾಗಿತ್ತು.ದೂರಿನ ತನಿಖೆಗೆ ಸಮಿತಿ ಯೊಂದನ್ನೂ ರಚಿಸಲಾಗಿತ್ತು. ಸಮಿತಿ ಕೈಗೊಂಡ ತನಿಖೆಯಲ್ಲಿ ಹಣಕಾಸಿನ ವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ.
ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸೀನ್ ಗೆ ವರದಿ ಸಲ್ಲಿಕೆ ಮಾಡಲಾಗಿದ್ದು, ವರದಿ ಅನ್ವಯ ಡಾ. ದೀಪಿಕಾ ಅವ್ರನ್ನು ಅಮಾನತು ಮಾಡಲಾಗಿದೆ.
“ತನಿಖೆಯಲ್ಲಿ ಕಂಡು ಬಂದ ಅಂಶಗಳು”
- ತಾಯಂದಿರ ಆರೋಗ್ಯಕ್ಕೆ ಸಂಬಂಧಿಸಿದ ಮಾರ್ಗಸೂಚಿ ಅನುಷ್ಠಾನ ಮಾಡದಿರುವುದು
- ಸಿಸೇರಿಯನ್ ಬಗ್ಗೆ ಆಡಿಟ್ ನಡೆಸದಿರುವುದು
- ಅಕ್ರಮವಾಗಿ ಗರ್ಭಪಾತ ನಡೆಸಿರುವುದು
- ಗರ್ಭಾಶಯದ ಅನಗತ್ಯ ಶಸ್ತ್ರ ಚಿಕಿತ್ಸೆ ನಡೆಸಿರುವುದು.
- ವೈದ್ಯಕೀಯ ನಿರ್ಲಕ್ಷ್ಯವಹಿಸಿರುವುದು.
- ಭ್ರಷ್ಟಚಾರ ಹೆಚ್ಚಿನ ಮಟ್ಟದಲ್ಲಿ ಕಂಡುಬಂದಿರುವುದು.
- ಸಹ ಪ್ರಸೂತಿ ತಜ್ಞರು ಹಾಗೂ ಸ್ನಾತಕ್ಕೋತರ ವಿದ್ಯಾರ್ಥಿಗಳಿಗೆ ಕಿರುಕುಳ ಕೊಟ್ಟಿರುವುದು.
- ಅಕ್ರಮದಲ್ಲಿ ಆಸ್ಪತ್ರೆ ಶುಶ್ರೂಷಾಧಿಕಾರಿ ಭಾಗಿ.
- ರೋಗಿಗಳಿಂದ ಹಣ ಪಡೆದು ದೀಪಿಕಾ ವರ್ಗಾವಣೆ ಮಾಡಿರುವುದು.
- ಅನನುಭವಿಗಳು ಹೆರಿಗೆ ಪ್ರಕಣಗಳನ್ನು ನಿರ್ವಹಣೆ ಮಾಡಿರುವುದು
- 29 ವರ್ಷದ ಬಾಣಂತಿ ಸಾವಿಗೆ ನಿರ್ಲಕ್ಷ್ಯವೇ ಕಾರಣ ಎನ್ನುವುದು