ಬೆಂಗಳೂರು: ನಗರದ ಅಲ್ಲಲ್ಲಿ ಮಳೆ, ಗಾಳಿ, ಬಿರುಗಾಳಿಯಿಂದಾಗಿ ಜನ – ಜೀವನ ಅಸ್ತವ್ಯಸ್ಥವಾಗುತ್ತಿದೆ. ಹಲೆವೆಡೆ ಸಾಕಷ್ಟು ಅವಾಂತರಗಳು ನಡೆಯುತ್ತಿವೆ.
ಬಿರುಗಾಳಿ ಮಳೆಗೆ ಬೃಹತ್ ಜಾಹಿರಾತು ಫಲಕವೊಂದು ಧರೆಗೆ ಉರುಳಿರುವ ಘಟನೆ ನಡೆದಿದೆ. ಈ ಘಟನೆ ಸರ್ಜಾಪುರ ರಸ್ತೆ ಯಮರೆ ಗೇಟ್ ಬಳಿ ನಡೆದಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಯಮರೆ ರಸ್ತೆ ಪಕ್ಕದ ಜಮೀನಿನಲ್ಲಿ ಅಳವಡಿಸಿರುವ ಬೃಹತ್ ಜಾಹಿರಾತು ಫಲಕ ಶನಿವಾರ ಸಂಜೆ ಸುರಿದ ಭಾರೀ ಮಳೆ ಹಾಗೂ ಗಾಳಿಗೆ ಉರುಳಿ ಬಿದ್ದಿದೆ.
ಸುಜುಕಿ ಶೋ ರೂಮ್ ಆವರಣದಲ್ಲಿ ಜಾಹೀರಾತು ಫಲಕ ಬಿದ್ದ ಪರಿಣಾಮ ಯಾವುದೇ ಸಾವು-ನೋವು ಸಂಭವಿಸಿಲ್ಲ. ಸ್ಥಳಕ್ಕೆ ಸರ್ಜಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


















