ಹುಬ್ಬಳ್ಳಿ : ಆಕಸ್ಮಿಕವಾಗಿ ಅಂಗಡಿಗಳು ಹೊತ್ತಿ ಉರಿದಿರುವ ಘಟನೆ ಹುಬ್ಬಳ್ಳಿ ಹೊರವಲಯದ ಕುಂದಗೋಳ ಕ್ರಾಸ್ ಬಳಿ ನಡೆದಿದೆ.
ಸಾಲಾಗಿ ಒಂದಕ್ಕೊಂದು ಅಂಗಡಿಗಳು ಅಂಟಿಕೊಂಡಿದ್ದವು. ಒಂದು ಅಂಗಡಿಯಲ್ಲಿ ಹೊತ್ತಿಕೊಂಡ ಬೆಂಕಿ ಅಕ್ಕ ಪಕ್ಕದ ಅಂಗಡಿಗಳಿಗೂ ವ್ಯಾಪಿಸಿ ಒಟ್ಟು ನಾಲ್ಕು ಅಂಗಡಿಗಳು ಸುಟ್ಟು ಕರಕಲಾಗಿವೆ.
ಸ್ಥಳಕ್ಕೆ ತಕ್ಷಣ ಅಗ್ನಿ ಶಾಮಕ ದಳ ಆಗಮಿಸಿದ್ದು, ಬೆಂಕಿ ಆರಿಸಲು ಮುಂದಾಗಿದ್ದಾರೆ. ಈ ಪ್ರಕರಣ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ : ಐಫೋನ್ 18 ಪ್ರೊ : 2026ರಲ್ಲಿ ಬಿಡುಗಡೆಯಾಗಲಿರುವ ಆಪಲ್‌ನ ಬಹುನಿರೀಕ್ಷಿತ ಫೋನಿನ 7 ಪ್ರಮುಖ ವಿಶೇಷತೆಗಳು ಇಲ್ಲಿವೆ



















