ಹುಬ್ಬಳ್ಳಿ : ಹೈಕೋರ್ಟ್ ನ ಸೂಚನೆ ಇದ್ದರೂ ಕರ್ತವ್ಯಕ್ಕೆ ಹಾಜರಾಗದೇ, ಸಾರಿಗೆ ಮುಷ್ಕರದಲ್ಲಿ ಭಾಗಿಯಾಗಿದ್ದ ಮೂರು ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ನೋಟಿಸ್ ನೀಡಲಾಗಿದೆ.
ಈ ಕುರಿತು ವಾಯುವ್ಯ ಸಾರಿಗೆ ನಿಗಮದ ಎಂ ಡಿ ಪ್ರಿಯಾಂಗಾ ಮಾಹಿತಿ ನೀಡಿದ್ದು, 2787 ಚಾಲಕ, ನಿರ್ವಾಹಕರಿಗೆ, 420 ಮೆಕಾನಿಕ್, 78 ಆಡಳಿತ ಸಿಬ್ಬಂದಿಗಳಿಗೆ ನೋಟಿಸ್ ನೀಡಿಲಾಗಿದೆ. NWKRTC ವ್ಯಾಪ್ತಿಯ 7 ಜಿಲ್ಲೆಯ 11 ವಿಭಾಗದ ಸಿಬ್ಬಂದಿಗಳಿಗೆ ನೋಟಿಸ್ ಜಾರಿಯಾಗಿದೆ.
ಒಂದೇ ದಿನಕ್ಕೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 2 ಕೋಟಿ ರೂಪಾಯಿ ನಷ್ಟವಾಗಿದೆ. ಪ್ರತಿದಿನ NWKRTC ಸಂಸ್ಥೆಯ 4900 ಬಸ್‌ಗಳ ಸಂಚಾರ ಮಾಡುತ್ತಿದ್ದವು, ಮುಷ್ಕರ ದಿನ ಸಿಬ್ಬಂದಿಗಳಿಗಳಿಲ್ಲದ ಕಾರಣ ಸಾವಿರಕ್ಕೂ ಹೆಚ್ಚು ಬಸ್‌ಗಳು ರಸ್ತೆಗಿಳಿದಿರಲಿಲ್ಲ, ಹೀಗಾಗಿ ಒಂದೇ ದಿನ ಮುಷ್ಕರದ ಎಫೆಕ್ಟ್ ನಿಂದ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಪ್ರಿಯಾಂಗಾ ಮಾಹಿತಿ ನೀಡಿದರು.



















