ಹುಬ್ಬಳ್ಳಿ | ಹುಬ್ಬಳ್ಳಿಯ ನೂರಾನಿ ಮಾರ್ಕೆಟ್‌ನಲ್ಲಿ ಕಾರು ಮತ್ತು ಇ-ಟಾಯ್ಲೆಟ್ ಆಕಸ್ಮಿಕವಾಗಿ ಹೊತ್ತಿ ಉರಿದಿದೆ. ಈ ದುರಂತದ ಪರಿಣಾಮ ಕಾರು ಸೇರಿದಂತೆ ಇ-ಟಾಯ್ಲೆಟ್ ಸುಟ್ಟು ಕರಕಲಾಗಿದೆ. ಬಳಿಕ ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದಾವಿಸಿದ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.
ಮೊದಲು ಬೆಂಕಿ ಕಸಕ್ಕೆ ಹೊತ್ತಿಕೊಂಡು ಬಳಿಕ ಕಾರಿಗೆ ಮತ್ತು ಇ-ಟಾಯ್ಲೆಟ್‌ಗೆ ವ್ಯಾಪಿಸಿದೆ ಎನ್ನಲಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಈ ಘಟನೆ ಕಮರಿಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ : ಬಾಗಲಕೋಟೆ | ಜೀತಕ್ಕೆ ದುಡಿಯುತ್ತಿದ್ದ ಒಡಿಶಾ ಮೂಲದ 24 ಮಂದಿ ಕಾರ್ಮಿಕರ ರಕ್ಷಣೆ



















