ಹುಬ್ಬಳ್ಳಿ: ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 9.3 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆದಿರುವ ಘಟನೆ ನರಸಾಪೂರ – ಹುಬ್ಬಳ್ಳಿ ಅಮರಾವತಿ ಎಕ್ಸ್ಪ್ರೆಸ್ನಲ್ಲಿ ನಡೆದಿದೆ.
ರೈಲಿನ ಜನರಲ್ ಬೋಗಿಯಲ್ಲಿ ಸಾಗಿಸುತ್ತಿದ್ದ 9.3 ಕೆ.ಜಿ. ಗಾಂಜಾವನ್ನು ಹುಬ್ಬಳ್ಳಿ ರೈಲ್ವೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಖಚಿತ ಸುಳಿವು ಆಧರಿಸಿ ದಾಳಿ ನಡೆಸಿದ ರೈಲ್ವೆ ಪೊಲೀಸರು, ಆಸನವೊಂದರ ಕೆಳಭಾಗದಲ್ಲಿ ಇಡಲಾಗಿದ್ದ ಚೀಲದಲ್ಲಿ ಅಂದಾಜು 4.66 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ಪತ್ತೆಯಾಗಿದೆ.
ಸದ್ಯ ಈ ಘಟನಾ ಸಂಬಂಧ ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ವಿದ್ಯುತ್ ಕಂಬದ ಮೇಲ್ತಂತಿ ತಗುಲಿ ಟ್ರ್ಯಾಕ್ಟರ್ ಸುಟ್ಟು ಭಸ್ಮ..!



















