ನಾನು ಯಾವುದೇ ವಿಚಾರವನ್ನು ಹೈಕಮಾಂಡ್ ನೊಂದಿಗೆ ಚರ್ಚಿಸಿದ್ದೇನೆ. ನೀವು ಹೇಗೆ ನನ್ನನ್ನು ಸಿಲುಕಿಸಲು ಪ್ರಯತ್ನಿಸಿದರೂ ನಾನು ಬಲಿಯಾಗಲ್ಲ. ಯಾವುದೇ ವಿಚಾರಕ್ಕೂ ನಾನು ಪ್ರತಿಕ್ರಿಯಸಲ್ಲ. ನಿಮ್ಮ ಪ್ರಶ್ನೆಯಲ್ಲೇ ಉತ್ತರವಿದೆ ಎಂದಿ ಡಿಸಿಎಂ ಡಿಕೆಶಿ ಹೇಳಿದ್ದಾರೆ.
ವರದಿಗಾರರಿಗೆ ಪ್ರತಿಕ್ರಿಯಿಸಿದ ಡಿಸಿಎಂ, ನನಗೆ ಕೊಟ್ಟ ಜವಬ್ದಾರಿ ಕೆಲಸ ಮಾಡ್ತಾ ಇದ್ದೇನೆ. ನಾನು ಯಾವುದೇ ವಿಚಾರಕ್ಕೆ ಪ್ರತಿಕ್ರಿಯಿಸುವುದಿಲ್ಲ. ಪಕ್ಷ ಇದ್ದರೆ ಮಾತ್ರ ನಾನು, ಪಕ್ಷವೇ ಇಲ್ಲದೇ ಹೋದರೆ ಹೇಗೆ ? ನಾನು ಖರ್ಗೆ ಕೊಟ್ಟ ದೀಕ್ಷೆ ಸ್ವೀಕಾರ ಮಾಡಿದ್ದೇನೆಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿಕೆಶಿ, ಶ್ರಮಕ್ಕೆ ಪ್ರತಿಫಲ ಇದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಮಾತ್ರವಲ್ಲದೇ, ಪಕ್ಷದಲ್ಲಿ ಒಟ್ಟಾಗಿ ದುಡಿಯೋಣ, ನಿಮ್ಮ ಶ್ರಮ ಇರಲಿ, ಶ್ರಮಕ್ಕೆ ಫಲ ಇರಲಿದೆ. ಮನಸ್ದಿದ್ದರೆ ಮಾರ್ಗ ಇದೆ, ಶ್ರಮವಿದ್ದಲ್ಲಿ ಫಲವಿದೆ. ಮಿಕ್ಕಿದ್ದು ಭಗವಂತ ಇದ್ದಾನೆ. ಪಾರ್ಟಿಯಿಂದ ನಾನು. ಪಾರ್ಟಿ ಇಲ್ಲದಿದ್ದರೇ ನಾನಿಲ್ಲ ಎಂದವರು ಪ್ರತಿಕ್ರಿಯಿಸಿದ್ಧಾರೆ.



















