ಮಡಿಕೇರಿ: ಕಚೇರಿಯಲ್ಲೇ ಸರ್ಕಾರಿ ಅಧಿಕಾರಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಮಡಿಕೇರಿ (Madikeri)ಯಲ್ಲಿ ನಡೆದಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (Food Supply Department) ಉಪ ನಿರ್ದೇಶಕ ಸಾವನ್ನಪ್ಪಿದ್ದಾರೆ. ಶ್ರೀಧರ್ ಮೂರ್ತಿ ಸಾವನ್ನಪ್ಪಿರುವ ಅಧಿಕಾರಿ ಎನ್ನಲಾಗಿದೆ.
ಶ್ರೀಧರ್ ಎಂದಿನಂತೆ ಕಚೇರಿಗೆ ಬಂದಿದ್ದರು. ಇಂದು ಕಚೇರಿಯಲ್ಲಿ ಸಭೆ ಕೂಡ ಇತ್ತು. ಇದಕ್ಕಾಗಿ ತಯಾರಿ ನಡೆದಿತ್ತು. ಆದರೆ, ಅಷ್ಟರಲ್ಲಿ ಶ್ರೀಧರ್ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
28ದಿನಗಳ ಹಿಂದಷ್ಟೇ ಅವರು ಕೊಡಗು ಆಹಾರ ಮತ್ತು ನಾಗರಿಕ ಸರಬರಾಜು ಡಿಡಿ ಆಗಿ ಬಂದಿದ್ದರು. ಇವರು ಮೂಲತಃ ಚಿತ್ರದುರ್ಗ (Chitradurga) ಜಿಲ್ಲೆಯವರು ಎನ್ನಲಾಗಿದೆ.