ಮುಂಬಯಿ: ‘ವಾರ್ 2’ (War 2) ಚಿತ್ರದ ವೇಳೆ ಅವಘಡವೊಂದು ಸಂಭವಿಸಿದ್ದು, ಹಾಡಿನ ಚಿತ್ರೀಕರಣದ ಸಂದರ್ಭದಲ್ಲಿ ಹೃತಿಕ್ ರೋಷನ್ ಕಾಲಿಗೆ ಗಂಭಿರವಾದ ಗಾಯಗಳಾಗಿವೆ. ವೈದ್ಯರು ಒಂದು ತಿಂಗಳು ವಿಶ್ರಾಂತಿ ಪಡೆಯಬೇಕು ಅಂತಾ ಸಲಹೆ ನೀಡಿದ್ದಾರೆ. ಹೀಗಾಗಿ ಚಿತ್ರದ ಚಿತ್ರೀಕರಣವನ್ನೇ ಮುಂದಕ್ಕೆ ಹಾಕಲಾಗಿದೆ.
ಈ ಚಿತ್ರದಲ್ಲಿ ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್ಟಿಆರ್ ನಟಿಸುತ್ತಿದ್ದಾರೆ. ‘ವಾರ್ 2’ ಚಿತ್ರದಲ್ಲಿ ಭರ್ಜರಿ ಸ್ಟೆಪ್ ಗಳಿರುವ ಹಾಡನ್ನು ನೀಡಲಾಗಿತ್ತು. ಇಬ್ಬರೂ ನಾಯಕ ನಟರು ಡ್ಯಾನ್ಸ್ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ. ಹೀಗಾಗಿ ವೈದ್ಯರು ನಾಲ್ಕು ವಾರಗಳ ವಿಶ್ರಾಂತಿಗೆ ಸೂಚಿಸಿದ್ದಾರೆ. ಇದರಿಂದ ಸಿನಿಮಾ ಶೂಟ್ ಮೇ ತಿಂಗಳಿಗೆ ಮುಂದೂಡಲ್ಪಟ್ಟಿದೆ.
ಸಿನಿಮಾನ ಆಗಸ್ಟ್ 14ರಂದು ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇತ್ತು. ಆದರೆ, ಈಗ ಹೃತಿಕ್ ಇಂಜೂರಿ ಕಾರಣದಿಂದ ಅಂದುಕೊಂಡ ದಿನಾಂಕದಂದು ಸಿನಿಮಾ ತರಲಾಗುತ್ತದೆಯೋ? ಅಥವಾ ಇಲ್ಲವೋ? ಎನ್ನುವ ಪ್ರಶ್ನೆ ಚಿತ್ರರಂಗವನ್ನು ಕಾಡುತ್ತಿದೆ.
ಈಗಾಗಲೇ ಟಾಕಿ ಪೋರ್ಷನ್ ಬಹುತೇಕ ಪೂರ್ಣಗೊಂಡಿದೆ. ಈ ಚಿತ್ರಕ್ಕೆ ಕಿಯಾರಾ ಅಡ್ವಾಣಿ ನಾಯಕಿ. ಅವರು ಪ್ರೆಗ್ನೆಂಟ್ ಎಂದು ಘೋಷಣೆ ಮಾಡಿದ್ದಾರೆ. ಹೀಗಾಗಿ ಅವರ ಭಾಗದ ಶೂಟ್ ಈಗಾಗಲೇ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ. ಚಿತ್ರವನ್ನು ‘ಬ್ರಹ್ಮಾಸ್ತ್ರ’ ಖ್ಯಾತಿಯ ಅಯಾನ್ ಮುಖರ್ಜಿ ನಿರ್ದೇಶನ ಮಾಡುತ್ತಿದ್ದಾರೆ.