ಬೆಂಗಳೂರು: ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ 63 ಜ್ಯೂನಿಯರ್ ಎಕ್ಸಿಕ್ಯೂಟಿವ್ (HPCL Recruitment 2025) ಹುದ್ದೆಗಳು ಖಾಲಿ ಇದ್ದು, ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಮಾರ್ಚ್ 26ರಂದೇ ನೋಟಿಫಿಕೇಶನ್ ಹೊರಡಿಸಲಾಗಿದ್ದು, ಏಪ್ರಿಲ್ 30ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಬಿಎಸ್ಸಿ ಹಾಗೂ ಡಿಪ್ಲೋಮಾ ಕೋರ್ಸ್ ಮುಗಿಸಿದವರು ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ
ಪೋಸ್ಟ್ ಹೆಸರು ಹುದ್ದೆಗಳು
ಜ್ಯೂನಿಯರ್ ಎಕ್ಸಿಕ್ಯೂಟಿವ್-ಮೆಕ್ಯಾನಿಕಲ್ 11
ಜ್ಯೂನಿಯರ್ ಎಕ್ಸಿಕ್ಯೂಟಿವ್-ಎಲೆಕ್ಟ್ರಿಕಲ್ 17
ಜ್ಯೂನಿಯರ್ ಎಕ್ಸಿಕ್ಯೂಟಿವ್-ಇನ್ ಸ್ಟ್ರುಮೆಂಟೇಷನ್ 06
ಜ್ಯೂನಿಯರ್ ಎಕ್ಸಿಕ್ಯೂಟಿವ್-ಕೆಮಿಕಲ್ 01
ಜ್ಯೂನಿಯರ್ ಎಕ್ಸಿಕ್ಯೂಟಿವ್-ಫೈರ್ ಆ್ಯಂಡ್ ಸೇಫ್ಟಿ 28
ಸಲ್ಲಿಸಬೇಕಾದ ದಾಖಲೆಗಳು
- ಪಾಸ್ ಪೋರ್ಟ್ ಸೈಜ್ ಫೋಟೋ
- ಸಿಗ್ನೇಚರ್
- ಇಮೇಲ್ ಐಡಿ, ಮೊಬೈಲ್ ನಂಬರ್
- ಡಿಪ್ಲೋಮಾ, ಬಿಎಸ್ಸಿ ಸರ್ಟಿಫಿಕೇಟ್
- ಜಾತಿ ಪ್ರಮಾಣಪತ್ರ
- ಪಿಡಬ್ಲ್ಯೂಡಿ ಸರ್ಟಿಫಿಕೇಟ್
ನಿಯಮಗಳು ಏನೇನು?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 25 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಡಿಪ್ಲೋಮಾ ಸೇರಿ ತತ್ಸಮಾನ ಪದವಿಯಲ್ಲಿ ಶೇ.50ಕ್ಕಿಂತ ಹೆಚ್ಚಿನ ಅಂಕ ಪಡೆದಿರಬೇಕು. ಎಸ್ಸಿ, ಎಸ್ಟಿಯವರಿಗೆ 5 ವರ್ಷದ ವಯೋಮಿತಿಯ ಸಡಿಲಿಕೆ ಇದೆ. ಒಬಿಸಿ, ಇಡಬ್ಲ್ಯೂಎಸ್ ನವರಿಗೆ ಮೂರು ವರ್ಷದ ಸಡಿಲಿಕೆ ಇದೆ.
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವವರು www.hindustanpetroleum.com ವೆಬ್ ಸೈಟ್ ಗೆ ತೆರಳಿ ಅರ್ಜಿ ಸಲ್ಲಿಸಬಹುದಾಗಿದೆ. ಮಾಸಿಕ 30 ಸಾವಿರ ರೂಪಾಯಿಯಿಂದ 1.2 ಲಕ್ಷ ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ. ಮೊದಲು ಕಂಪ್ಯೂಟರ್ ಆಧಾರಿತ ಟೆಸ್ಟ್ ಇರುತ್ತದೆ. ನಂತರ, ಗ್ರೂಪ್ ಡಿಸ್ಕಷನ್, ಸ್ಕಿಲ್ ಟೆಸ್ಟ್, ವೈಯಕ್ತಿಕ ಸಂದರ್ಶನ ಹಾಗೂ ಮೆಡಿಕಲ್ ಎಕ್ಸಾಮಿನೇಷನ್ ಮಾಡಿದ ನಂತರ ನೇಮಕಾತಿ ಆದೇಶ ನೀಡಲಾಗುತ್ತದೆ.