ಪಿಎಫ್ ಖಾತೆಯಲ್ಲಿರುವ ಹಣ ವಿತ್ಡ್ರಾ ಮಾಡಲು ಕಷ್ಟವಾಗುತ್ತಿದೆಯೇ? ಎಮರ್ಜನ್ಸಿ ಇದೆ, ದುಡ್ಡು ಬೇಕು, ಆದ್ರೆ, ಪಿಎಫ್ ಖಾತೆಯ ಹಣ ತೆಗೆಯಲು ತುಂಬ ದಿನ ಬೇಕು ಎಂಬ ಚಿಂತೆ ಕಾಡುತ್ತಿದೆಯೇ? ಆನ್್ಲೈಿನ್ನಲ್ಲಿ ಪಿಎಫ್ ಹಣ ಡ್ರಾ ಮಾಡಲು ದಾಖಲೆಗಳನ್ನ ನೀಡಿ ಸುಸ್ತಾಗಿದೆಯೇ? ಹಾಗಾದ್ರೆ, ಈ ಚಿಂತೆ, ದುಗುಡ, ಆತಂಕ, ದಾಖಲೆಗಳ ತಲೆನೋವು ತುಂಬ ದಿನ ಇರುವುದಿಲ್ಲ. ಹೌದು, ಪಿಎಫ್ ಖಾತೆಯಲ್ಲಿರುವ ಹಣವನ್ನು ಹೊಸ ವರ್ಷದಿಂದ ಎಟಿಎಂ ಮೂಲಕವೇ ಡ್ರಾ ಮಾಡಬಹುದು. ಜನವರಿಯಿಂದಲೇ ಎಟಿಎಂ ಮೂಲಕ ಪಿಎಫ್ ದುಡ್ಡನ್ನ ಡ್ರಾ ಮಾಡುವ ಯೋಜನೆಗೆ ಚಾಲನೆ ನೀಡುವುದಾಗಿ ಕೇಂದ್ರ ಸರ್ಕಾರವೇ ಹೇಳಿರೋದ್ರಿಂದ ಪಿಎಫ್ ಸದಸ್ಯರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ.
ದೇಶದಲ್ಲಿ 7 ಕೋಟಿಗೂ ಅಧಿಕ ಇಪಿಎಫ್ಒ ಸದಸ್ಯರಿದ್ದು, ಅವರು ಸುಲಭವಾಗಿ ಖಾತೆಯಿಂದ ಹಣ ಡ್ರಾ ಮಾಡಲಿ ಎಂಬ ದೃಷ್ಟಿಯಿಂದ ಕೇಂದ್ರ ಸರ್ಕಾರವು ಹೊಸ ಯೋಜನೆ ಜಾರಿಗೆ ತರಲು ಮುಂದಾಗಿದೆ. ಪ್ರತಿ ಈಗ ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಪಿಎಫ್ ಮೊತ್ತವನ್ನು ಡ್ರಾ ಮಾಡಬಹುದಾಗಿದ್ದು, ಹಣ ಡ್ರಾ ಮಾಡಲು 10-15 ದಿನ ಕಾಯಬೇಕಾಗುತ್ತದೆ. ಇದನ್ನು ತಪ್ಪಿಸಲೆಂದೇ ಕೇಂದ್ರ ಸರ್ಕಾರ ಹೊಸ ಯೋಜನೆ ಜಾರಿಗೆ ತರುತ್ತಿದೆ.
ಎಟಿಎಂ ಮೂಲಕ ಪಿಎಫ್ ಹಣವನ್ನು ಡ್ರಾ ಮಾಡುವ ತಂತ್ರಜ್ಞಾನದ ಜಾರಿಗೆ ಐಟಿ ತಂತ್ರಜ್ಞಾನದ ಜತೆಗೆ ಕೇಂದ್ರ ಸರ್ಕಾರವು ಎಐ ತಂತ್ರಜ್ಞಾನವನ್ನೂ ಬಳಸಿಕೊಳ್ಳುತ್ತಿದೆ. ನೀಡಿದ ಎಟಿಎಂ ಮೂಲಕ ಒಬ್ಬ ಸದಸ್ಯನು ಎಟಿಎಂಗೆ ತೆರಳಿ, ಅದನ್ನು ಬಳಸಿ, ಒನ್ ಟೈಮ್ ಪಾಸ್ವರ್ಡ್ ಮೂಲಕ ಹಣವನ್ನು ಡ್ರಾ ಮಾಡಬಹುದಾಗಿದೆ. ಈ ಮೆಕ್ಯಾನಿಸಂನ ಸಂಪೂರ್ಣ ಮಾಹಿತಿಯನ್ನು ಕೇಂದ್ರ ಸರ್ಕಾರ ಇನ್ನಷ್ಟೇ ನೀಡಬೇಕಿದೆ.
ಕೇಂದ್ರ ಸರ್ಕಾರವು ಪಿಎಫ್ ಸದಸ್ಯನ ಒಟ್ಟು ಮೊತ್ತದ ಶೇ.50ರಷ್ಟು ಮೊತ್ತವನ್ನು ಎಟಿಎಂ ಮೂಲಕ ಡ್ರಾ ಮಾಡಬಹುದಾಗಿದ್ದರೂ, ತುರ್ತು ಸಂದರ್ಭಗಳಲ್ಲಿ ಆತ ಹೆಚ್ಚಿನ ಮೊತ್ತವನ್ನು ಡ್ರಾ ಮಾಡಬಹುದಾಗಿದೆ. 55 ವರ್ಷ ದಾಟಿದ ನಿವೃತ್ತರು ಶೇ.100ರಷ್ಟು ಮೊತ್ತವನ್ನ, ಕೆಲವೇ ದಿನಗಳಲ್ಲಿ ನಿವೃತ್ತರಾಗುವವರು ಶೇ.90ರಷ್ಟು ಮೊತ್ತವನ್ನು ಡ್ರಾ ಮಾಡಬಹುದಾಗಿದೆ. ಹಾಗಾಗಿ, ಇಪಿಎಫ್ಒ ಸದಸ್ಯರು ಇಷ್ಟೇ ಹಣ ಡ್ರಾ ಮಾಡಬೇಕೇ ಎಂಬ ಗೊಂದಲಕ್ಕೆ ಸಿಲುಕೋದು ಬೇಡ.
ಇಪಿಎಫ್ಒ ಸದಸ್ಯರಿಗೆ ಕೇಂದ್ರ ಸರ್ಕಾರವು ವಿಮೆಯ ಸೌಕರ್ಯವನ್ನೂ ನೀಡುತ್ತದೆ. ಅಂದರೆ, ಉದ್ಯೋಗಿಗಳ ಠೇವಣಿ ಆಧಾರಿತ ಯೋಜನೆ ಅಂದರೆ, ಇಡಿಎಲ್ಐ ಯೋಜನೆ ಅಡಿಯಲ್ಲಿ ಇಪಿಎಫ್ಒ ಸದಸ್ಯರಿಗೆ 7 ಲಕ್ಷ ರೂ.ವರೆಗೆ ವಿಮಾ ಸೌಕರ್ಯ ಇರುತ್ತದೆ. ಇಪಿಎಫ್ಒ ಸದಸ್ಯನು ಅಕಾಲಿಕವಾಗಿ ಮೃತಪಟ್ಟರೆ, ಆತನ ಕುಟುಂಬಕ್ಕೆ 7 ಲಕ್ಷ ರೂ. ನೀಡಲಾಗುತ್ತದೆ. ಇಪಿಎಫ್ಒ ಸದಸ್ಯ ನಾಮನಿರ್ದೇಶನ ಮಾಡಿದ ಸದಸ್ಯರು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಎಟಿಎಂ ಮೂಲಕವೇ ವಿಮೆಯ ಹಣವನ್ನು ಡ್ರಾ ಮಾಡಬಹುದಾಗಿದೆ.
ಇದಿಷ್ಟು ಪಿಎಫ್ ಹಾಗೂ ವಿಮೆಯ ಹಣವನ್ನು ಎಟಿಎಂ ಮೂಲಕ ಡ್ರಾ ಮಾಡುವ ಕುರಿತ ಮಾಹಿತಿಯಾಗಿದೆ. ಮೂಲಗಳ ಪ್ರಕಾರ, ಕೇಂದ್ರ ಸರ್ಕಾರವು ಕೆಲವೇ ದಿನಗಳಲ್ಲಿ ಎಟಿಎಂ ನೀಡಿಕೆ, ಅದರ ಪ್ರಕ್ರಿಯೆ, ಸದಸ್ಯರು ಅರ್ಜಿ ಸಲ್ಲಿಸುವ ವಿಧಾನ ಸೇರಿ ಹತ್ತಾರು ಮಾಹಿತಿಯನ್ನು ಹಂಚಿಕೊಳ್ಳಲಿದೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಹೊಸ ಯೋಜನೆಯಿಂದ ಜನ ಸುಲಭವಾಗಿ ಪಿಎಫ್ ಹಣವನ್ನಂತೂ ಡ್ರಾ ಮಾಡಬಹುದಾಗಿದೆ. ಮುಂದಿನ ಎಪಿಸೋಡ್ನಲ್ಲಿ ಮತ್ತೊಂದು ಮಾಹಿತಿಯನ್ನು ಹೊತ್ತುತರ್ತೇವೆ.