ಬೆಂಗಳೂರು: ವಿದೇಶಕ್ಕೆ ಪ್ರವಾಸಕ್ಕಾಗಿ ತೆರಳಬೇಕು. ವಿದೇಶದಲ್ಲಿ ಕೆಲಸ ಮಾಡಲು, ಶಿಕ್ಷಣ ಪಡೆಯಲು ಸೇರಿ ಹಲವು ಕಾರಣಗಳಿಗಾಗಿ ವಿದೇಶಕ್ಕೆ ತೆರಳಬೇಕು ಎಂದರೆ ಪಾಸ್ ಪೋರ್ಟ್ ಬೇಕೇಬೇಕು. ದಿಢೀರನೆ ವಿದೇಶಕ್ಕೆ ಹೊರಟಾಗ ಪಾಸ್ ಪೋರ್ಟ್ ಪಡೆಯುವುದು ಕಷ್ಟವಾಗುತ್ತದೆ. ಹಾಗಾಗಿ, ಮೊದಲೇ ಪಾಸ್ ಪೋರ್ಟ್ ಪಡೆದಿದ್ದರೆ, ವಿದೇಶಕ್ಕೆ ಹೋಗಲು ಅನುಕೂಲವಾಗುತ್ತದೆ. ಪಾಸ್ ಪೋರ್ಟ್ ಅನ್ನು ಈಗ ಪಾಸ್ ಪೋರ್ಟ್ ಸೇವಾ ಕೇಂದ್ರದ ವೆಬ್ ಸೈಟ್ ನಲ್ಲಿಯೇ ಪಡೆಯಬಹುದಾಗಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸೋದು ಹೇಗೆ?
- ಪಾಸ್ ಪೋರ್ಟ್ ಸೇವಾ ಕೇಂದ್ರದ ವೆಬ್ಸೈಟ್ https://www.passportindia.gov.in/ ಗೆ ಭೇಟಿ ನೀಡಿ, ರಿಜಿಸ್ಟರ್ ಮಾಡಿಕೊಳ್ಳಬೇಕು
- ಹೊಸ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಿ/ ಪಾಸ್ಪೋರ್ಟ್ ಮರು-ವಿತರಣೆ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು
- ಅರ್ಜಿ ನಮೂನೆಯನ್ನು ಆನ್ಲೈನ್ನಲ್ಲಿ ಭರ್ತಿ ಮಾಡಿ ಮತ್ತು ಸಬ್ ಮಿಟ್ ಆಪ್ಶನ್ ಮೇಲೆ ಕ್ಲಿಕ್ ಮಾಡಿ.
- ಮುಖಪುಟಕ್ಕೆ ಹಿಂತಿರುಗಿ ಮತ್ತು ‘ಉಳಿಸಿದ ಅಥವಾ ಸಲ್ಲಿಸಿದ ಅರ್ಜಿಗಳನ್ನು ವೀಕ್ಷಿಸಿ’ ಆಯ್ಕೆ ಮಾಡಬೇಕು.
- “ಪಾವತಿಸಿ ಮತ್ತು ಭೇಟಿ ನಿಗದಿಪಡಿಸಿ” ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಆಯ್ಕೆ ಮಾಡಿದ ಪಾಸ್ಪೋರ್ಟ್ ಸೇವಾ ಕೇಂದ್ರದಲ್ಲಿ ಭೇಟಿಯ ಸಮಯ ಬುಕ್ ಮಾಡಿ. ನಂತರ, ಆನ್ ಲೈನ್ ಅಥವಾ ಆಫ್ ಲೈನ್ ನಲ್ಲಿ ಪಾವತಿ ಮಾಡಿ. ಇದರೊಂದಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿಯುತ್ತದೆ. ರಶೀದಿಯನ್ನು ಪ್ರಿಂಟೌಟ್ ಅಥವಾ ಡೌನ್ ಲೋಡ್ ಮಾಡಿಟ್ಟುಕೊಳ್ಳಿ.
ಯಾವ ದಾಖಲೆ ಸಲ್ಲಿಸಬೇಕು?
ಪಾಸ್ ಪೋರ್ಟ್ ಪಡೆಯಲು ವಯಸ್ಸು, ಲಿಂಗ, ದಾಖಲೆಗಳು, ರಾಷ್ಟ್ರೀಯತೆ ಮತ್ತು ಕಾನೂನು ಷರತ್ತುಗಳಂತಹ ಸರ್ಕಾರದ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು. 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಭಾರತೀಯ ನಾಗರಿಕರು ಅರ್ಜಿ ಸಲ್ಲಿಸಬಹುದು. 18 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ, ಪಾಸ್ ಪೋರ್ಟ್ 5 ವರ್ಷಗಳವರೆಗೆ ಅಥವಾ ಅವರು 18 ವರ್ಷ ತುಂಬುವವರೆಗೆ, ಯಾವುದು ಮೊದಲು ಬರುತ್ತದೆಯೋ ಅದುವರೆಗೆ ಮಾನ್ಯವಾಗಿರುತ್ತದೆ.



















